Asianet Suvarna News Asianet Suvarna News

ಪಿಬಿಎಲ್ ಹರಾಜು:62 ಲಕ್ಷಕ್ಕೆ ಪ್ರಣಯ್ ಸೇಲ್; ಬೆಂಗಳೂರು ಪಾಲಾದ ವಿಶ್ವದ ನಂ.1 ಆಟಗಾರ ವಿಕ್ಟರ್

ಚೆನ್ನೈ ಪಿ.ವಿ.ಸಿಂಧು ಅವರನ್ನು ₹48.75 ಲಕ್ಷ ನೀಡಿ ಉಳಿಸಿಕೊಂಡರೆ, ಸೈನಾರನ್ನು ಅವಧ್ ವಾರಿಯರ್ಸ್‌ ₹41.25 ಲಕ್ಷ ನೀಡಿ ಉಳಿಸಿಕೊಂಡಿತು.

PBL Auction Sindhu Saina Srikanth Retained by Old Teams

ಹೈದರಾಬಾದ್(ಅ.10): ಐಪಿಎಲ್ ಮಾದರಿಯ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್ 3ನೇ ಆವೃತ್ತಿಯ ಆಟಗಾರರ ಹರಾಜು ಪ್ರಕ್ರಿಯೆ ನಡೆದಿದ್ದು, ಎಚ್.ಎಸ್.ಪ್ರಣಯ್ ಅಹಮದಾಬಾದ್ ತಂಡಕ್ಕೆ ಬರೋಬ್ಬರಿ ₹62 ಲಕ್ಷಕ್ಕೆ ಬಿಕರಿಯಾದರು. ಈ ಆವೃತ್ತಿಯಲ್ಲಿ ಗರಿಷ್ಠ ಸಂಭಾವನೆ ಪಡೆಯಲಿರುವ ಆಟಗಾರ ಎನ್ನುವ ಕೀರ್ತಿಗೆ ಅವರು ಪಾತ್ರರಾದರು.

ಪ್ರತಿ ತಂಡಕ್ಕೆ ಈ ಮೊದಲು ತಂಡವನ್ನು ಪ್ರತಿನಿಧಿಸುತ್ತಿದ್ದ ಆಟಗಾರರನ್ನು ಉಳಿಸಿಕೊಳ್ಳುವ ಅವಕಾಶವಿತ್ತು. ಜತೆಗೆ ಒಬ್ಬ ಆಟಗಾರ/ಆಟಗಾರ್ತಿಯನ್ನು ‘ರೈಟ್ ಟು ಮ್ಯಾಚ್’ ಕಾರ್ಡ್ ಮೂಲಕ ತಂಡಕ್ಕೆ ಸೇರಿಸಿಕೊಳ್ಳುವ ಅವಕಾಶವಿತ್ತು. 2 ಹೊಸ ತಂಡಗಳಿಗೆ ‘ರೈಟ್ ಟು ಮ್ಯಾಚ್’ ಕಾರ್ಡ್ ಮೂಲಕ ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳಲು ಅವಕಾಶ ನೀಡಲಾಗಿತ್ತು.

ಚೆನ್ನೈ ಪಿ.ವಿ.ಸಿಂಧು ಅವರನ್ನು ₹48.75 ಲಕ್ಷ ನೀಡಿ ಉಳಿಸಿಕೊಂಡರೆ, ಸೈನಾರನ್ನು ಅವಧ್ ವಾರಿಯರ್ಸ್‌ ₹41.25 ಲಕ್ಷ ನೀಡಿ ಉಳಿಸಿಕೊಂಡಿತು. ಆಟಗಾರರನ್ನು ಉಳಿಸಿಕೊಳ್ಳುವ ತಂಡಗಳು ಕಳೆದ ಆವೃತ್ತಿಯಲ್ಲಿ ನೀಡುತ್ತಿದ್ದ ಸಂಭಾವನೆಗಿಂತ ಶೇ.25ರಷ್ಟು ಹೆಚ್ಚು ಮೊತ್ತ ಹಾಗೂ ‘ರೈಟ್ ಟು ಮ್ಯಾಚ್’ ಕಾರ್ಡ್ ಬಳಸುವ ತಂಡಗಳು ಕಳೆದ ಆವೃತ್ತಿಗಿಂತ ಶೇ.10ರಷ್ಟು ಹೆಚ್ಚು ಸಂಭಾವನೆ ನೀಡಬೇಕಿತ್ತು. ಅವಧ್ (ಲಖನೌ) ತಂಡ ಶ್ರೀಕಾಂತ್‌'ರನ್ನು ‘ರೈಟ್ ಟು ಮ್ಯಾಚ್’ ಕಾರ್ಡ್ ಬಳಸಿ ₹56.10 ಲಕ್ಷಕ್ಕೆ ಖರೀದಿ ಮಾಡಿತು.

ಪುರುಷರ ಸಿಂಗಲ್ಸ್ ವಿಶ್ವ ನಂ.1 ವಿಕ್ಟರ್ ಅಲ್ಸೆಕ್ಸನ್ ಬೆಂಗಳೂರು ತಂಡ ಸೇರಿದರೆ, ಮಹಿಳಾ ಸಿಂಗಲ್ಸ್ ನಂ.1 ತೈ ತ್ಸು ಯಿಂಗ್ ಅಹಮದಾಬಾದ್ ಪಾಲಾದರು. ಒಲಿಂಪಿಕ್ ಚಾಂಪಿಯನ್ ಕರೊಲಿನಾ ಮರಿನ್ ಹೈದರಾಬಾದ್ ತಂಡಕ್ಕೆ ಸೇರಿದರು. ಎಲ್ಲಾ 8 ತಂಡಗಳು ತಲಾ 10 ಆಟಗಾರರನ್ನು ಖರೀದಿ ಮಾಡಿತು.

Follow Us:
Download App:
  • android
  • ios