ಶತಮಾನದ ಕಳಪೆ ಬಾಲ್ ಎಸೆದ ಆಸೀಸ್ ಬೌಲರ್!

ಢಾಕಾ(ಆ.30): ಬಾಂಗ್ಲಾದೇಶದ ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ವೇಳೆ 67ನೇ ಓವರ್‌ನಲ್ಲಿ ದಾಳಿಗಿಳಿದ ಆಸೀಸ್‌ನ ಪ್ಯಾಟ್ ಕಮಿನ್ಸ್, ಶತಮಾನದ ಕೆಟ್ಟ ಎಸೆತವೊಂದನ್ನು ಎಸೆದಿದ್ದಾರೆ. ಬೌಲಿಂಗ್ ಮಾಡುವ ವೇಳೆ ನಿಯಂತ್ರಣ ಕಳೆದುಕೊಂಡ ಕಮಿನ್ಸ್ ಅವರ ಕೈಯಿಂದ ಜಾರಿದ ಚೆಂಡು ಪಿಚ್‌ನಿಂದ ಹೊರಕ್ಕೆ ಬಿದ್ದಿತು. ಅಂಪೈರ್ ನೋಬಾಲ್ ಎಂದರು.