ಪುರುಷರ ಸಿಂಗಲ್ಸ್ ವಿಭಾಗದ ಅರ್ಹತಾ ಸುತ್ತಿನ ಪಂದ್ಯದಲ್ಲಿ ಪಿ. ಕಶ್ಯಪ್ 13-21, 21-8, 20-22 ಗೇಮ್‌ಗಳಿಂದ ಈಸ್ಟೋನಿಯಾದ ರೌಲ್ ಮಸ್ಟ್ ಎದುರು ಪರಾಭವ ಹೊಂದಿದರು. 59 ನಿಮಿಷಗಳ ಕಾಲ ನಡೆದ ರೋಚಕ ಕಾದಾಟದಲ್ಲಿ ಅಂತಿಮವಾಗಿ ರೌಲ್ ಗೆಲುವು ಸಾಸಿದರು.

ಡೆನ್ಮಾರ್ಕ್(ಅ.19): ಭಾರತದ ಅನುಭವಿ ಶಟ್ಲರ್ ಪಾರುಪಳ್ಳಿ ಕಶ್ಯಪ್, ಡೆನ್ಮಾರ್ಕ್ ಸೂಪರ್ ಸೀರಿಸ್ ಬ್ಯಾಡ್ಮಿಂಟನ್ ಟೂರ್ನಿಯ ಅರ್ಹತಾ ಸುತ್ತಿನಲ್ಲಿ ಸೋಲುಂಡು ಹೊರಬಿದ್ದಿದ್ದಾರೆ.

Add Asianetnews Kannada as a Preferred SourcegooglePreferred

ಪುರುಷರ ಸಿಂಗಲ್ಸ್ ವಿಭಾಗದ ಅರ್ಹತಾ ಸುತ್ತಿನ ಪಂದ್ಯದಲ್ಲಿ ಪಿ. ಕಶ್ಯಪ್ 13-21, 21-8, 20-22 ಗೇಮ್‌ಗಳಿಂದ ಈಸ್ಟೋನಿಯಾದ ರೌಲ್ ಮಸ್ಟ್ ಎದುರು ಪರಾಭವ ಹೊಂದಿದರು. 59 ನಿಮಿಷಗಳ ಕಾಲ ನಡೆದ ರೋಚಕ ಕಾದಾಟದಲ್ಲಿ ಅಂತಿಮವಾಗಿ ರೌಲ್ ಗೆಲುವು ಸಾಸಿದರು.

ಕಳೆದ ವಾರ ನಡೆದಿದ್ದ ಡಚ್ ಓಪನ್ ಟೂರ್ನಿಯಲ್ಲೂ ರೌಲ್, ಕಶ್ಯಪ್ ಅವರನ್ನು ಮಣಿಸಿದ್ದರು. ಭಾರತದ ಆಟಗಾರ ಮೊದಲ ಗೇಮ್‌ನಲ್ಲಿ ಹಿನ್ನಡೆ ಅನುಭವಿಸಿದರು. ಆದರೆ 2ನೇ ಗೇಮ್‌ನಲ್ಲಿ ಕಶ್ಯಪ್ ತಿರುಗೇಟು ನೀಡುವಲ್ಲಿ ಸಫಲರಾದರು. ನಿರ್ಣಾಯಕ ಮತ್ತು 3ನೇ ಗೇಮ್‌ನಲ್ಲಿ ಕೊನೆಯ ಹಂತದವರೆಗೂ ರೋಚಕ ಹೋರಾಟ ನಡೆದಿತ್ತು. ಕೊನೆಯಲ್ಲಿ 2 ಪಾಯಿಂಟ್‌ಗಳ ಮುನ್ನಡೆ ಪಡೆದ ರೌಲ್ ಪಂದ್ಯ ಜಯಿಸಿದರು.