ಮುಂದಿನ ವಾರ ಆರಂಭವಾಗಲಿರುವ ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಹಿನ್ನೆಲೆಯಲ್ಲಿ ಭಾರತದ ಪ್ರಮುಖ ಸ್ಟಾರ್ ಆಟಗಾರರು ಈ ಪಂದ್ಯಾವಳಿಯಿಂದ ಹಿಮ್ಮೆಟ್ಟಿದ್ದಾರೆ.

ನವದೆಹಲಿ(ಏ.19): ಸತತ ಮೂರು ತಿಂಗಳ ನಂತರ ಸಕ್ರಿಯ ಬ್ಯಾಡ್ಮಿಂಟನ್ ಕೋರ್ಟ್‌ಗೆ ಆಗಮಿಸಿರುವ ಭಾರತದ ಮಾಜಿ ನಂ.1 ಬ್ಯಾಡ್ಮಿಂಟನ್ ಪಟು ಪರುಪಳ್ಳಿ ಕಶ್ಯಪ್ ಚೀನಾ ಗ್ರಾಂಡ್ ಪ್ರಿಕ್ಸ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಅಂತಿಮ ಹದಿನಾರರ ಘಟ್ಟಕ್ಕೆ ಪ್ರವೇಶ ಪಡೆದಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮೊಣಕಾಲು ನೋವಿನಿಂದಾಗಿ ಕೆಲವೊಂದು ಮಹತ್ವಪೂರ್ಣ ಟೂರ್ನಿಗಳಿಂದ ವಂಚಿತವಾದ ಕಶ್ಯಪ್, ವಿಶ್ವ ಪುರುಷರ ಬ್ಯಾಡ್ಮಿಂಟನ್ ಶ್ರೇಯಾಂಕದಲ್ಲಿ 104ನೇ ಸ್ಥಾನಕ್ಕೆ ಕುಸಿದಿದ್ದು, ಥಾಯ್ಲೆಂಡ್‌ನ ಸುಪ್ಪಾನ್ಯು ಅವಿಂಗ್‌'ಸನೊನ್ ಎದುರು 21-16, 21-17ರ ಎರಡು ನೇರ ಗೇಮ್‌'ಗಳಲ್ಲಿ ಗೆಲುವು ಸಾಧಿಸಿ ಹದಿನಾರರ ಘಟ್ಟಕ್ಕೆ ಏರಿದರು.

ಇನ್ನು ಪುರುಷರ ಸಿಂಗಲ್ಸ್ ವಿಭಾಗದ ಮತ್ತೊಂದು ಸುತ್ತಿನ ಪಂದ್ಯದಲ್ಲಿ 20ರ ಹರೆಯದ ಹರ್ಶೀಲ್ ದನಿ ಸ್ಥಳೀಯ ಆಟಗಾರ ಯಾನ್ ರುಂಜಿ 21-16, 22-20ರ ಎರಡು ನೇರ ಗೇಮ್‌ಗಳಲ್ಲಿ ಗೆಲುವು ಪಡೆದು ಮುಂದಿನ ಹಂತಕ್ಕೆ ಧಾವಿಸಿದರು.

ಮುಂದಿನ ವಾರ ಆರಂಭವಾಗಲಿರುವ ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಹಿನ್ನೆಲೆಯಲ್ಲಿ ಭಾರತದ ಪ್ರಮುಖ ಸ್ಟಾರ್ ಆಟಗಾರರು ಈ ಪಂದ್ಯಾವಳಿಯಿಂದ ಹಿಮ್ಮೆಟ್ಟಿದ್ದಾರೆ.