ಮದುವೆಗೆ ಒತ್ತಾಯಿಸಿ ರಾಷ್ಟ್ರೀಯ ಕಬಡ್ಡಿ ಚಾಂಪಿಯನ್ ಗೃಹ ಬಂಧನ

sports | Wednesday, February 14th, 2018
Suvarna Web Desk
Highlights

ರಾಷ್ಟ್ರೀಯ ಮಟ್ಟದ ಕಬಡ್ಡಿ ಆಟಗಾರ್ತಿಯೋರ್ವರನ್ನು ಆಕೆಯ ಕುಟಂಬ ಸದಸ್ಯರು ಮದುವೆಯಾಗುವಂತೆ ಒತ್ತಾಯಿಸಿದ್ದು, ಮನೆಯಲ್ಲಿ ಕೂಡಿಹಾಕಿದ ಘಟನೆ ಇದೀಗ ಬೆಳಕಿಗೆ ಬಂದಿದೆ.

ರೋಹ್ಟಕ್ : ರಾಷ್ಟ್ರೀಯ ಮಟ್ಟದ ಕಬಡ್ಡಿ ಆಟಗಾರ್ತಿಯೋರ್ವರನ್ನು ಆಕೆಯ ಕುಟಂಬ ಸದಸ್ಯರು ಮದುವೆಯಾಗುವಂತೆ ಒತ್ತಾಯಿಸಿದ್ದು, ಮನೆಯಲ್ಲಿ ಕೂಡಿಹಾಕಿದ ಘಟನೆ ಇದೀಗ ಬೆಳಕಿಗೆ ಬಂದಿದೆ.

ಈ ಸಂಬಂಧ ರೋಹ್ಟಕ್ ಮೂಲದ  ಆಟಗಾರ್ತಿಯ ಪೋಷಕರ ವಿರುದ್ಧ  ಹರ್ಯಾಣ ಮಹಿಳಾ ಆಯೋಗವು ದೂರು ದಾಖಲಿಸಿಕೊಂಡದೆ. ಅಲ್ಲದೇ ಆಕೆಯೇ  ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರಿಗೂ ಪತ್ರ ಬರೆದು ಈ ಬಗ್ಗೆ ತಿಳಿಸಿದ್ದಾರೆ.

ರೋಹ್ಟಕ್’ನ ಸಣ್ಣ ಹಳ್ಳಿಯೊಂದರಲ್ಲಿ ಹುಟ್ಟಿದ ಈಕೆ ತನ್ನ ಕ್ರೀಡಾ ಜೀವನಕ್ಕಾಗಿ ಅನೇಕ ಕಷ್ಟಗಳನ್ನು ಅನುಭವಿಸಿದ್ದರು. ಬಳಿಕ  ರಾಷ್ಟ್ರೀಯ ಮಟ್ಟದ ಕಬಡ್ಡಿಯಲ್ಲಿ ಹರ್ಯಾಣವನ್ನು ಪ್ರತಿನಿಧಿಸಿದ್ದರು.

ಆಕೆ ಕುಟುಂಬ ಸದಸ್ಯರು ವಯಸ್ಸಾದ ವ್ಯಕ್ತಿಯೊಂದಿಗೆ ಮದುವೆ ಮಾಡಲು ಬಯಸಿದ್ದರು. ಇದಕ್ಕೆ ಆಕೆ ವಿರೋಧ ವ್ಯಕ್ತಪಡಿಸಿದ್ದರಿಂದ ಆಕೆಯನ್ನು ಮನೆಯಲ್ಲಿ ಕೂಡಿಹಾಕಲಾಗಿತ್ತು.

ಬಳಿಕ ಯಾರದೋ ಸಹಾಯ ಪಡೆದು ಅಲ್ಲಿಂದ ತಪ್ಪಿಸಿಕೊಂಡಿದ್ದಳು. ಮತ್ತೆ ಓದನ್ನು ಮುಂದುವರಿಸಬೇಕು ಹಾಗೂ ಕ್ರೀಡಾ ಜೀವನದಲ್ಲಿ ಮುನ್ನಡೆ ಸಾಧಿಸಬೇಕು ಎನ್ನುವುದೇ ಆಕೆಯ ಗುರಿಯಾಗಿದೆ.

Comments 0
Add Comment