ಸಂಜು ಸ್ಯಾಮ್ಸನ್ ಹಾಗೂ ರಿಷಭ್ ಪಂತ್ ಆಟ ಒಂದಂಕಿ ಮೊತ್ತಕ್ಕೆ ಸೀಮಿತವಾದರೆ, ಶ್ರೇಯಸ್ ಅಯ್ಯರ್ ಹಾಗೂ ಕೃನಾಲ್ ಪಾಂಡ್ಯ ಶೂನ್ಯ ಸುತ್ತಿ ನಿರಾಸೆ ಮೂಡಿಸಿದರು.

ಪ್ರಿಟೊರಿಯಾ(ಜು.26): ಬ್ಯಾಟಿಂಗ್ ವೈಫಲ್ಯದಿಂದಾಗಿ ದಕ್ಷಿಣ ಆಫ್ರಿಕಾ ‘ಎ’ ವಿರುದ್ಧ ತ್ರಿಕೋನ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ‘ಎ’ ತಂಡ 2 ವಿಕೆಟ್‌'ಗಳ ಸೋಲು ಅನುಭವಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ ಭಾರತ ‘ಎ’ ಮನೀಶ್ ಪಾಂಡೆ ಅರ್ಧಶತಕದ ಹೊರತಾಗಿಯೂ 152 ರನ್‌ಗಳಿಗೆ ಆಲೌಟ್ ಆಯಿತು. ಮನೀಶ್ ಪಾಂಡೆ ಹೊರತು ಪಡಿಸಿದರೆ, ಮತ್ತೋರ್ವ ಕನ್ನಡಿಗ ಕರುಣ್ ನಾಯರ್ 25 ರನ್ ಬಾರಿಸಿದರು. ಸಂಜು ಸ್ಯಾಮ್ಸನ್ ಹಾಗೂ ರಿಷಭ್ ಪಂತ್ ಆಟ ಒಂದಂಕಿ ಮೊತ್ತಕ್ಕೆ ಸೀಮಿತವಾದರೆ, ಶ್ರೇಯಸ್ ಅಯ್ಯರ್ ಹಾಗೂ ಕೃನಾಲ್ ಪಾಂಡ್ಯ ಶೂನ್ಯ ಸುತ್ತಿ ನಿರಾಸೆ ಮೂಡಿಸಿದರು. ಕೆಳಕ್ರಮಾಂಕದಲ್ಲಿ ಯಜುವೇಂದ್ರ ಚಾಹಲ್ ಹೋರಾಟದ ಫಲವಾಗಿ ಭಾರತ 'ಎ' ತಂಡ 150ರ ಗಡಿ ದಾಟುವಲ್ಲಿ ಸಫಲವಾಯಿತು.

ಇನ್ನು ಸುಲಭ ಗುರಿಬೆನ್ನತ್ತಿದ ದಕ್ಷಿಣ ಆಫ್ರಿಕಾ ‘8’ ತಂಡ 8 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.

ಸಂಕ್ಷಿಪ್ತ ಸ್ಕೋರ್:

ಭಾರತ ‘ಎ’ : 152/10

(ಪಾಂಡೆ 55, ಕರುಣ್ 25, ಫಂಗಿಸೊ 30/4)

 ದ.ಆಫ್ರಿಕಾ ‘ಎ’: 153/8

(ಪ್ರಿಟೊರಿಯಸ್ 38, ಬೆಹರ್ದ್ದೀನ್ 37, ಚೆಹಲ್ 41/3)