2007ರಿಂದೀಚೆಗೆ ಭಾರತ ಹಾಗೂ ಪಾಕಿಸ್ತಾನ ತಂಡಗಳು ಇದುವರೆಗೆ ಒಮ್ಮೆಯೂ ದ್ವಿಪಕ್ಷೀಯ ಪಂದ್ಯವಳಿಗಳನ್ನಾಡಿಲ್ಲ. ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ದ್ವಿಪಕ್ಷೀಯ ಪಂದ್ಯಾವಳಿಗಳನ್ನಾಡಿಸಲು ಪ್ರಯತ್ನಿಸಿತಾದರೂ, ಭಾರತ ಸರ್ಕಾರವು ಪಾಕಿಸ್ತಾನದಲ್ಲಿ ಕ್ರಿಕೆಟ್ ಆಡಲು ಅನುಮತಿ ನೀಡಿಲ್ಲ.
ಕರಾಚಿ: ಉದಯೋನ್ಮುಖ ರಾಷ್ಟ್ರಗಳ ಪಂದ್ಯಾವಳಿ ವಿಚಾರವಾಗಿ ಪಾಕಿಸ್ತಾನ ಕ್ರಿಕೆಟ್ ಬೋರ್ಡ್, ಬಿಸಿಸಿಐ ವಿರುದ್ಧ ಮುನಿಸಿಕೊಂಡಿದೆ. ಇದೇ ವಾರ ಕೌಲಾಲಂಪುರದಲ್ಲಿ ನಡೆಯಲಿರುವ ಏಷ್ಯಾ ಕ್ರಿಕೆಟ್ ಸಮಿತಿ ಸಭೆಯಲ್ಲಿ ಈ ಪಂದ್ಯಾವಳಿಯಲ್ಲಿ ಭಾರತದ ಪಾಲ್ಗೊಳ್ಳುವಿಕೆ ಕುರಿತು ಸ್ಪಷ್ಟ ಚಿತ್ರಣ ನೀಡುವಂತೆ ಬಿಸಿಸಿಐ ಮೇಲೆ ಒತ್ತಡ ಹೇರುವ ಸಾಧ್ಯತೆ ಇದೆ.
ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಹಿರಿಯ ಅಧಿಕಾರಿಯೊಬ್ಬರು, ‘ಉದಯೋನ್ಮುಖ ರಾಷ್ಟ್ರಗಳ ಪಂದ್ಯಾವಳಿಯಲ್ಲಿ ಆಡಲು ಬಿಸಿಸಿಐ ಭಾರತ ತಂಡವನ್ನು ಪಾಕಿಸ್ತಾನ ಕಳುಹಿಸದಿದ್ದರೆ, ಭಾರತದಲ್ಲಿ ನಡೆಯಲಿರುವ ಏಷ್ಯಾಕಪ್ ಅನ್ನು ಪಾಕಿಸ್ತಾನ ಬಹಿಷ್ಕರಿಸಲಿದೆ. ಇಲ್ಲವೇ ಏಷ್ಯಾಕಪ್ ಟೂರ್ನಿಯನ್ನು ಭಾರತದಿಂದ ಸ್ಥಳಾಂತರಿಸಲು ಎಸಿಸಿಗೆ ಪಿಸಿಬಿ ಮನವಿ ಸಲ್ಲಿಸಲಿದೆ’ ಎಂದಿದ್ದಾರೆ.