‘‘ನಿರಕ್ಷೇಪಣಾ ಅರ್ಜಿಗಾಗಿ ಗೃಹ ಸಚಿವಾಲಯ, ಕ್ರೀಡಾ ಮಂಡಳಿಗೆ ಅರ್ಜಿಗಳನ್ನು ಸಲ್ಲಿಸಲಾಗಿದೆ. ಈ ಎರಡೂ ಸಂಸ್ಥೆಗಳು ಪಾಕಿಸ್ತಾನದ ವಿದೇಶಾಂಗ ಇಲಾಖೆಯನ್ನು ಸಂಪರ್ಕಿಸಿ ಈ ಬಗ್ಗೆ ಪರಾಮರ್ಶೆ ನಡೆಸಿವೆ. ಭಾರತದೊಂದಿಗಿನ ಸಂಬಂಧ ಹದಗೆಟ್ಟಿದ್ದರೂ ನಮಗೆ ನಿರಕ್ಷೇಪಣಾ ಪತ್ರ ಸಿಗುವುದೆಂಬ ವಿಶ್ವಾಸವಿದೆ’’- ಶಹಬಾಜ್ ಅಹ್ಮದ್(ಪಿಎಚ್‌ಎಫ್ ಕಾರ್ಯದರ್ಶಿ)
ಕರಾಚಿ(ನ.02): ಮುಂದಿನ ತಿಂಗಳು ಭಾರತದಲ್ಲಿ ನಡೆಯಲಿರುವ ಕಿರಿಯರ ಹಾಕಿ ವಿಶ್ವಕಪ್ನಲ್ಲಿ ಪಾಲ್ಗೊಳ್ಳಲು ಅಗತ್ಯವಿರುವ ನಿರಕ್ಷೇಪಣಾ ಪತ್ರಕ್ಕಾಗಿ ಪಾಕಿಸ್ತಾನ ಸರ್ಕಾರಕ್ಕೆ ಮೂರು ವಾರಗಳ ಹಿಂದೆಯೇ ಅರ್ಜಿ ಸಲ್ಲಿಸಿರುವುದಾಗಿ ಪಾಕಿಸ್ತಾನ ಹಾಕಿ ಸಂಸ್ಥೆ (ಪಿಎಚ್ಎಫ್) ಹೇಳಿದೆ.
‘‘ನಿರಕ್ಷೇಪಣಾ ಅರ್ಜಿಗಾಗಿ ಗೃಹ ಸಚಿವಾಲಯ, ಕ್ರೀಡಾ ಮಂಡಳಿಗೆ ಅರ್ಜಿಗಳನ್ನು ಸಲ್ಲಿಸಲಾಗಿದೆ. ಈ ಎರಡೂ ಸಂಸ್ಥೆಗಳು ಪಾಕಿಸ್ತಾನದ ವಿದೇಶಾಂಗ ಇಲಾಖೆಯನ್ನು ಸಂಪರ್ಕಿಸಿ ಈ ಬಗ್ಗೆ ಪರಾಮರ್ಶೆ ನಡೆಸಿವೆ. ಭಾರತದೊಂದಿಗಿನ ಸಂಬಂಧ ಹದಗೆಟ್ಟಿದ್ದರೂ ನಮಗೆ ನಿರಕ್ಷೇಪಣಾ ಪತ್ರ ಸಿಗುವುದೆಂಬ ವಿಶ್ವಾಸವಿದೆ’’ ಎಂದು ಪಿಎಚ್ಎಫ್ ಕಾರ್ಯದರ್ಶಿ ಶಹಬಾಜ್ ಅಹ್ಮದ್ ಹೇಳಿದ್ದಾರೆ.
ಡಿಸೆಂಬರ್ 9ರಿಂದ ಲಖನೌದಲ್ಲಿ ಕಿರಿಯರ ವಿಶ್ವಕಪ್ ಹಾಕಿ ಆರಂಭಗೊಳ್ಳಲಿದೆ.
