ಅ.29ರಂದು ಲೋಹಾರ್‌'ನಲ್ಲಿ ಏಕೈಕ ಟಿ20 ಪಂದ್ಯವನ್ನಾಡಲು ಲಂಕಾ ಕ್ರಿಕೆಟ್ ಮಂಡಳಿ ಸಹ ಸಮ್ಮತಿ ಸೂಚಿಸಿದೆ.

ಕರಾಚಿ(ಸೆ.14): ವೆಸ್ಟ್‌ಇಂಡೀಸ್ ಇದೇ ನವೆಂಬರ್'ನಲ್ಲಿ 3 ಪಂದ್ಯಗಳ ಟಿ20 ಸರಣಿಯನ್ನಾಡಲು ಲಾಹೋರ್‌ಗೆ ಆಗಮಿಸಲಿದೆ ಎಂದು ಬುಧವಾರ ಪಾಕಿಸ್ತಾನ ಕ್ರಿಕೆಟ್ ಮಂಡಳಿ ತಿಳಿಸಿದೆ.

ವೇಳಾಪಟ್ಟಿಯನ್ನು ಸದ್ಯದಲ್ಲೇ ಪ್ರಕಟಗೊಳಿಸುವುದಾಗಿ ಪಿಸಿಬಿ ಅಧ್ಯಕ್ಷ ನಜಮ್ ಸೇಠಿ ಹೇಳಿದ್ದಾರೆ. ಜತೆಗೆ ಅ.29ರಂದು ಲೋಹಾರ್‌'ನಲ್ಲಿ ಏಕೈಕ ಟಿ20 ಪಂದ್ಯವನ್ನಾಡಲು ಲಂಕಾ ಕ್ರಿಕೆಟ್ ಮಂಡಳಿ ಸಹ ಸಮ್ಮತಿ ಸೂಚಿಸಿದೆ.

ವಿಶ್ವ ಇಲೆವೆನ್ ವಿರುದ್ಧ ಟಿ20 ಸರಣಿ ಯಶಸ್ವಿಯಾಗಿ ಸಾಗುತ್ತಿದ್ದು, ಮುಂದಿನ 2 ವರ್ಷ ಸಹ ವಿಶ್ವ ಇಲೆವೆನ್ ತಂಡವನ್ನು ಆಹ್ವಾನಿಸುವುದಾಗಿ ಪಿಸಿಬಿ ತಿಳಿಸಿದೆ.