ಫಿಫಾ ವಿಶ್ವಕಪ್ ಟೂರ್ನಿ ಪಂದ್ಯಗಳಿಗೆ ಬಳಸೋ ಫುಟ್ಬಾಲ್ ಚೆಂಡು ತಯಾರಾಗೋದು ಎಲ್ಲಿ ಅನ್ನೋ ಕುತೂಹಲಕ್ಕೆ ಇಲ್ಲಿದೆ ಉತ್ತರ. ಈ ಚೆಂಡಿನ ವಿಶೇಷತೆ ಏನು? ಹೇಗೆ ತಯಾರಿಸಲಾಗಿದೆ ಅನ್ನೋ ವಿವರಕ್ಕೆ ಈ ಸ್ಟೋರಿ ನೋಡಿ.
ಸೈಲ್‌ಕೋಟ್(ಜೂನ್.9): ಫಿಫಾ ವಿಶ್ವಕಪ್ ಟೂರ್ನಿ ಅದ್ಧೂರಿಯಾಗಿ ಉದ್ಘಾಟನೆಗೊಳ್ಳಲು ಇನ್ನು ಕೆಲವೇ ದಿನಗಳು ಉಳಿದಿವೆ. ರಶ್ಯಾದಲ್ಲಿ ನಡೆಯಲಿರುವ ಫುಟ್ಬಾಲ್ ವಿಶ್ವಕಪ್ ಟೂರ್ನಿಗೆ ಎಲ್ಲಾ ತಯಾರಿಗಳು ಪೂರ್ಣಗೊಂಡಿದೆ. ರಶ್ಯಾ ಫಿಫಾ ವಿಶ್ವಕಪ್ ಪಂದ್ಯಗಳಿಗೆ ಬಳಸೋ ಫುಟ್ಬಾಲ್ ಚೆಂಡು ತಯಾರಾಗೋದು ಪಾಕಿಸ್ತಾನದ ಸೈಲ್‌ಕೋಟ್‌ನಲ್ಲಿ ಅನ್ನೋದು ವಿಶೇಷ.
ಈ ಬಾರಿಯ ಫಿಫಾ ವಿಶ್ವಕಪ್ ಪಂದ್ಯಕ್ಕೆ ಬಳಸೋ ಅಡಿಡಾಸ್ ಟೆಲ್‌ಸ್ಟಾರ್ 18 ಚೆಂಡನ್ನ ಪಾಕಿಸ್ತಾನ ತಯಾರಿಸಿದೆ. ಹಾಗಂತ ಪಾಕಿಸ್ತಾನ ಫಿಫಾ ವಿಶ್ವಕಪ್ ಟೂರ್ನಿಗೆ ಚೆಂಡು ತಯಾರಿಸುತ್ತಿರೋದು ಇದೇ ಮೊದಲಲ್ಲ. 2014ರ ಬ್ರೆಜಿಲ್ ವಿಶ್ವಕಪ್ ಟೂರ್ನಿಗೆ ತಯಾರಿಸಲಾದ ಬ್ರಝೂಕಾ ಚೆಂಡನ್ನೂ ಕೂಡ ಪಾಕಿಸ್ತಾನವೇ ತಯಾರಿಸಿತ್ತು.
ಫಿಫಾ ವಿಶ್ವಕಪ್‌ಗಾಗಿ 40 ಮಿಲಿಯನ್ ಚೆಂಡುಗಳನ್ನ ಪಾಕಿಸ್ತಾನ ತಯಾರಿಸಿದೆ. ವಿಶೇಷವಾಗಿ ಅಡಿಡಾಸ್ ಟೆಲ್‌ಸ್ಟಾರ್ 18 ಚೆಂಡನ್ನಶೂನ್ಯ ಗುರುತ್ವಾಕರ್ಷಣೆಯಲ್ಲಿ ಈ ಚೆಂಡನ್ನ ತಯಾರಿಸಲಾಗಿದೆ. ಕೃತಕ ಉಪಗ್ರಹದಲ್ಲಿ ತಯಾರಿಸಲಾದ ಈ ಚೆಂಡು, ಈ ಬಾರಿಯ ಫುಟ್ಬಾಲ್ ಟೂರ್ನಿಯ ವಿಶೇಷತೆಯಲ್ಲೊಂದು.
2018ರ ಫಿಫಾ ವಿಶ್ವಕಪ್ ಜೂನ್ 14 ರಂದು ರಶ್ಯಾದಲ್ಲಿ ಆರಂಭಗೊಳ್ಳಲಿದೆ. 32 ತಂಡಗಳು ಪಾಲ್ಗೊಳ್ಳುತ್ತಿರು ಈ ಮಹತ್ವದ ಟೂರ್ನಿಯಲ್ಲಿ 64 ಪಂದ್ಯಗಳು ನಡೆಯಲಿವೆ.
