ಕರಾಚಿ[ಮಾ.22]: ಭಾರತದಲ್ಲಿ ಪಾಕಿಸ್ತಾನ ಸೂಪರ್‌ ಲೀಗ್‌ (ಪಿಎಸ್‌ಎಲ್‌) ಟಿ20 ಟೂರ್ನಿಯ ಪಂದ್ಯಗಳ ಪ್ರಸಾರ ರದ್ದುಗೊಳಿಸಿದ್ದಕ್ಕೆ, ಈಗ ಐಪಿಎಲ್‌ ಪಂದ್ಯಗಳನ್ನು ಪ್ರಸಾರ ಮಾಡದಿರಲು ಪಾಕಿಸ್ತಾನ ನಿರ್ಧರಿಸಿದೆ. 

IPL 2019: RCB ಆಟಗಾರರ ಕಂಪ್ಲೀಟ್ ಲಿಸ್ಟ್!

ಪಾಕಿಸ್ತಾನದ ಮಾಹಿತಿ ಹಾಗೂ ಪ್ರಸಾರ ಖಾತೆ ಸಚಿವ ಫಾವದ್‌ ಚೌಧರಿ ಈ ವಿಷಯವನ್ನು ಬಹಿರಂಗಗೊಳಿಸಿದ್ದಾರೆ. ಜಿಯೋ ಸ್ಪೋರ್ಟ್ಸ್ ವಾಹಿನಿ, ಪಾಕಿಸ್ತಾನದಲ್ಲಿ ಐಪಿಎಲ್‌ ಪ್ರಸಾರ ಹಕ್ಕು ಹೊಂದಿತ್ತು.

IPL 2019: ಗರಿಷ್ಠ ಸಿಕ್ಸರ್ ಸಿಡಿಸಿದ ಟಾಪ್ 10 ಬ್ಯಾಟ್ಸ್’ಮನ್’ಗಳಿವರು..!

ಪುಲ್ವಾಮಾ ದಾಳಿಯನ್ನು ಖಂಡಿಸಿ ಭಾರತದಲ್ಲಿ ಪಿಎಸ್‌ಎಲ್‌ ಪಂದ್ಯಗಳ ಪ್ರಸಾರವನ್ನು ಡಿಸ್ಪೋರ್ಟ್ಸ್ ವಾಹಿನಿ ಸ್ಥಗಿತಗೊಳಿಸಿತ್ತು. ಆದರೆ ಪ್ಲೇ-ಆಫ್‌ ಹಂತ ಶುರುವಾದಾಗ ಪ್ರಸಾರ ಪುನಾರಂಭಗೊಂಡಿತ್ತು. ಟೂರ್ನಿ ಆರಂಭಗೊಂಡು 3 ದಿನಗಳ ಬಳಿಕ, ಪಾಕ್‌ ಕ್ರಿಕೆಟ್‌ ಮಂಡಳಿಯೊಂದಿಗಿನ ಒಪ್ಪಂದ ಮುರಿದು ಪಂದ್ಯಗಳ ಪ್ರಸಾರ ನಿರ್ಮಾಣವನ್ನು ಭಾರತದ ರಿಲಯನ್ಸ್‌-ಐಎಂಜಿ ಸಂಸ್ಥೆ ರದ್ದುಗೊಳಿಸಿತ್ತು. ಇದರಿಂದಾಗಿ ಕೆಲ ದಿನಗಳ ಕಾಲ ಪಾಕಿಸ್ತಾನದಲ್ಲೇ ಪಂದ್ಯಗಳ ಪ್ರಸಾರ ನಿಂತು ಹೋಗಿತ್ತು. ‘ಪಿಎಸ್‌ಎಲ್‌ ವೇಳೆ ಭಾರತೀಯ ಸಂಸ್ಥೆಗಳು ಹಾಗೂ ಸರ್ಕಾರ, ಪಾಕಿಸ್ತಾನ ಕ್ರಿಕೆಟನ್ನು ಕಂಡ ರೀತಿಯನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ’ ಎಂದು ಸಚಿವ ಫಾವದ್‌ ಹೇಳಿದ್ದಾರೆ.