ದುಬೈ(ಜು.30): ಪಾಕಿಸ್ತಾನದ ತಂಡದ ಪ್ರಮುಖ ವೇಗಿಯಾಗಿ ಗುರುತಿಸಿಕೊಂಡಿರುವ ಹಸನ್ ಆಲಿ, ಭಾರತೀಯರಿಗೆ ಹೆಚ್ಚು ಪರಿಯಚವಾಗಿದ್ದು ವಾಘ ಗಡಿಯಲ್ಲಿ ಮಾಡಿದ ಅತಿರೇಖದ ವರ್ತನೆಯಿಂದ. ಭಾರತೀಯ ಸೇನೆ ವಿರುದ್ಧ ತೊಡೆ ತಟ್ಟಿ ಅತೇರೇಖದಿಂದ ವರ್ತಿಸಿದ ಹಸನ್ ಆಲಿ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಹಸನ್ ಆಲಿ ಮದುವೆಯಾಗುತ್ತಿರುವುದು ಭಾರತದ ಹುಡುಗಿ ಅನ್ನೋದು ವಿಶೇಷ.

ಇದನ್ನೂ ಓದಿ: ವಾಘಾ ಗಡಿಯಲ್ಲಿ ತೊಡೆ ತಟ್ಟಿದ್ದ ಹಸನ್ ಅಲಿಗೆ ಚಳಿ ಬಿಡಿಸಿದ ಪಾಕ್ ಕ್ರಿಕೆಟಿಗರು..!

ವಾಘ ಗಡಿಯಲ್ಲಿ ಭಾರತವನ್ನು ದ್ವೇಷಿಸಿದ್ದ ಹಸನ್ ಆಲಿ ವಿರುದ್ದ ಪಾಕಿಸ್ತಾನ ಕ್ರಿಕೆಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಹಸನ್ ಆಲಿ, ಹರಿಯಾಣದ ಮೇವತ್ ಜಿಲ್ಲೆಯ ಶಾಮಿಯಾ ಅರ್ಝೂ ಕೈಹಿಡಿಯಲಿದ್ದಾರೆ. ಆಗಸ್ಟ್ 20 ರಂದು ದುಬೈನ ಖಾಸಗಿ ಹೊಟೆಲ್‌ನಲ್ಲಿ ಹಸನ್ ಆಲಿ ಮದುವೆ ಸಮಾರಂಭ ಏರ್ಪಡಿಸಲಾಗಿದೆ.

ಇದನ್ನೂ ಓದಿ: ವಾಘಾದಲ್ಲಿ ಘರ್ಜಿಸುವುದಕ್ಕಿಂತ ಮೈದಾನದಲ್ಲಿ ಆಡಿ- ಪಾಕ್‌ಗೆ ಅಖ್ತರ್ ತರಾಟೆ!

ಶಾಮಿಯಾ,  ತಂದೆ, ತಾಯಿ, ಸೋಹದರ ಹಾಗೂ ಕುಟುಂಬಸ್ಥರು ಆಗಸ್ಟ್ 17 ರಂದು  ದುಬೈಗೆ ತೆರಳಲಿದ್ದಾರೆ. ಹರಿಯಾಣದ ಮಾನವ್ ರಚನಾ ವಿಶ್ವವಿದ್ಯಾಲಯದಲ್ಲಿ ಏರೋನಾಟಿಕಲ್ ಡಿಗ್ರಿ ಪಡೆದಿರುವ ಶಾಮಿಯಾ, ಜೆಟ್ ಏರ್‌ವೇಸ್‌ನಲ್ಲಿ ಕೆಲಸ ಮಾಡುತ್ತಿದ್ದರು. ಸದ್ಯ ಎಮಿರೇಟ್ಸ್ ಏರ್‌ಲೈನ್ಸ್‌ನಲ್ಲಿ ಫ್ಲೈಟ್ ಎಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. 

ಹಸನ್ ಆಲಿ, ಭಾರತೀಯ ಹುಡುಗಿಯನ್ನು ವರಿಸುತ್ತಿರುವ ಪಾಕಿಸ್ತಾನ ಮೊದಲ ಕ್ರಿಕೆಟಿಗನಲ್ಲ. ಇತ್ತೀಚೆಗೆ ನಿವೃತ್ತಿಯಾದ ಶೋಯಿಬ್ ಮಲ್ಲಿಕ್, ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾರನ್ನು ವರಿಸಿದ್ದಾರೆ. ಇದಕ್ಕೂ ಮೊದಲು ಜಹೀರ್ ಅಬ್ಬಾಸ್ ಹಾಗೂ ಮೊಹ್ಸಿನ್ ಹಸನ್ ಖಾನ್ ಭಾರತೀಯರನ್ನು ಮದುವೆಯಾಗಿದ್ದಾರೆ.