ಕರಾಚಿ(ಆ.20): ಪಾಕಿಸ್ತಾನ ವೇಗಿ ಹಸನ್ ಆಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಭಾರತದ ಶಾಮಿಯಾ ಅರ್ಝೂ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ವೇಗಿಗೆ ಪಾಕಿಸ್ತಾನ ಹಾಲಿ, ಮಾಜಿ ಕ್ರಿಕೆಟಿಗರು, ಭಾರತದ ಟೆನಿಸ್ ತಾರೆ ಸಾನಿಯ ಮಿರ್ಜಾ ಸೇರಿದಂತೆ ಹಲವರು ಶುಭಕೋರಿದ್ದಾರೆ. ಇಂಡೋ-ಪಾಕ್ ಉಭಯ ದೇಶಗಳ ನಡುವಿನ ಉತ್ತಮ ಬಾಂಧವ್ಯ ವೃದ್ದಿಯಾಗಲಿದೆ ಎಂದು ಆಶಾಭಾವನೆ ವ್ಯಕ್ತಪಡಿಸಿದ್ದಾರೆ. ಆದರೆ ಹಸನ್ ಆಲಿ ಮದುವೆಗೂ ಮುನ್ನ ಕಾಶ್ಮೀರ ವಿಚಾರ ಕೆದಕಿದ್ದಾರೆ. ಈ ಮೂಲಕ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಇದನ್ನೂ ಓದಿ: ಭಾರತದ ಶಾಮಿಯಾ ಜೊತೆ ಪಾಕ್ ಕ್ರಿಕೆಟಿಗ ಹಸನ್ ಆಲಿ ಮದುವೆ!

ದುಬೈನಲ್ಲಿ ನಡೆದ ವಿವಾಹದಲ್ಲಿ ಹರ್ಯಾಣ ವೀವತ್ ಜಿಲ್ಲೆಯ ಶಾಮಿಯಾ ಅರ್ಝೂ ಜೊತೆ ಹಸನ್ ಆಲಿ ವಿವಾಹವಾಗಿದ್ದಾರೆ. ಹಸನ್ ಆಲಿ ಎಲ್ಲೆಲ್ಲಿ ಭಾರತವನ್ನು ಕೆಣಕಲು ಸಾಧ್ಯವೋ ಅಲ್ಲೆಲ್ಲಾ ಪಾಕಿಸ್ತಾನಿ ಬುದ್ದಿ ತೋರಿಸಿದ್ದಾರೆ. ವಾಘಾ ಗಡಿಯಲ್ಲಿನ ಭಾರತೀಯ ಸೈನಿಕರ ಮುಂದೆ ಅತಿರೇಖದ ವರ್ತನೆ ತೋರಿದ ಬಳಿಕ ಇದೀಗ ಕಾಶ್ಮೀರ ವಿಚಾರವನ್ನೂ ಕೆಣಕಿದ್ದಾರೆ. ಭಾರತ ಸರ್ಕಾರ ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಛಾನ ಮಾನ ರದ್ದು ಮಾಡಿದ ಬೆನ್ನಲ್ಲೇ, ಹಸನ್ ಆಲಿ ನನ್ನ ಕಾಶ್ಮೀರ ಸಹೋದರರನ್ನು ಅಲ್ಲಾ ಕಾಪಾಡಲಿ ಎಂದಿದ್ದಾನೆ.

 

ಇದನ್ನೂ ಓದಿ: ವಾಘಾ ಗಡಿಯಲ್ಲಿ ತೊಡೆ ತಟ್ಟಿದ್ದ ಹಸನ್ ಅಲಿಗೆ ಚಳಿ ಬಿಡಿಸಿದ ಪಾಕ್ ಕ್ರಿಕೆಟಿಗರು..!

ಆಗಸ್ಟ್ 14 ಪಾಕಿಸ್ತಾನ ಸ್ವಾತಂತ್ರ್ಯ ದಿನಾಚರಣೆ ಆಚರಿಸುತ್ತೆ. ಈ ವೇಳೆ ಪಾಕಿಸ್ತಾನಕ್ಕೆ ಸ್ವಾತಂತ್ರಯ ದಿನಾಚರಣೆ ಶುಭಕೋರುವ ಸಂದರ್ಭದಲ್ಲಿ ಹಸನ್ ಆಲಿ ಕಾಶ್ಮೀರ ವಿಚಾರವನ್ನೂ ಕೆದಕಿದ್ದಾರೆ. ಕಾಶ್ಮೀರಿಗರಿಗೆ ನನ್ನ ಪ್ರಾರ್ಥನೆ. ಅಲ್ಲಾ ಕಾಪಾಡಲಿ ಎಂದು ಟ್ವೀಟ್ ಮಾಡಿದ್ದಾರೆ.