26 ವರ್ಷದ ಯುವಕ 175 ಎಸತಗಳಲ್ಲಿ 320 ರನ್ ಚಚ್ಚಿ ಹೊಸ ದಾಖಲೆ ಬರೆದಿದ್ದಾನೆ.

ಕರಾಚಿ(ಮೇ.26): ಏಕದಿನ ಪಂದ್ಯದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಈಗಾಗಲೇ 7 ದ್ವಿಶತಕಗಳು ಬಂದಿವೆ. ಅದರಲ್ಲಿ ಭಾರತೀಯರೇ 4 ಸಿಡಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈಗ ಪಾಕಿಸ್ತಾನದ ಕ್ಲಬ್ ಆಟಗಾರನೊಬ್ಬ ತ್ರಿಶಕ ಬಾರಿಸಿದ್ದಾನೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ ಆಶ್ರಯದಲ್ಲಿ ನಡೆಯುತ್ತಿರುವ ಝಲ್ ಮೆಹಮೂದ್ ಅಂತರ ಕ್ಲಬ್ ಕ್ರಿಕೆಟ್ ಚಾಂಪಿಯನ್‌ಶಿಪ್‌ನಲ್ಲಿ ಆಡಿದ ಬಿಲಾಲ್ ಅರ್ಷದ್ ಎಂಬ 26 ವರ್ಷದ ಯುವಕ 175 ಎಸತಗಳಲ್ಲಿ 320 ರನ್ ಚಚ್ಚಿ ಹೊಸ ದಾಖಲೆ ಬರೆದಿದ್ದಾನೆ.

ಈತನ ಆಟದಲ್ಲಿ 42 ಬೌಂಡರಿ ಹಾಗೂ 9 ಸಿಕ್ಸರ್‌ಗಳಿದ್ದವು. ಈತನ ತಂಡ 50 ಓವರ್‌ಗಳಲ್ಲಿ 556 ರನ್ ಪೇರಿಸಿತ್ತಲ್ಲದೇ 411 ರನ್‌ಗಳ ಬೃಹತ್ ಗೆಲುವು ದಾಖಲಿಸಿತು.