ನವದೆಹಲಿ(ಫೆ.17): ಇತ್ತೀಚೆಗಷ್ಟೇ ಕೋಲ್ಕತಾದಲ್ಲಿ ನಡೆಯುತ್ತಿದ್ದ ಅಭ್ಯಾಸ ಪಂದ್ಯದ ವೇಳೆ ಬ್ಯಾಟ್ಸ್‌ಮನ್‌ ಬಾರಿಸಿದ ಚೆಂಡು ಬೌಲರ್‌ ಅಶೋಕ್‌ ದಿಂಡಾ ತಲೆಗೆ ಬಡಿದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದೃಷ್ಟವಶಾತ್‌ ಯಾವುದೇ ಅನಾಹುತವಾಗಲಿಲ್ಲ. 

ಇದನ್ನೂ ಓದಿ: ರಾಂಚಿ ಕ್ರೀಡಾಂಗಣದಲ್ಲಿ ಧೋನಿ ಸ್ಟ್ಯಾಂಡ್‌?

ಈ ಘಟನೆ ಬಳಿಕ ಭಾರತೀಯ ಬೌಲರ್‌ಗಳಿಂದ ರಕ್ಷಣಾ ಮಾಸ್ಕ್‌ಗೆ ಬೇಡಿಕೆ ಹೆಚ್ಚಾಗಿದೆ. ಸ್ವತಃ ದಿಂಡಾ ಮಾಸ್ಕ್‌ ಹಾಕಿ ಬೌಲ್‌ ಮಾಡಲು ಅನುಮತಿ ಕೋರಿದ್ದಾರೆ. ದಿಂಡಾ ಬೇಡಿಕೆಗೆ ದನಿಗೂಡಿಸಿರುವ ಸೌರಾಷ್ಟ್ರ ವೇಗಿ ಜಯದೇವ್‌ ಉನಾದ್ಕತ್‌, ಇತ್ತೀಚಿನ ದಿನಗಳಲ್ಲಿ ಬೌಲರ್‌ಗಳಿಗೆ ಪೆಟ್ಟು ಬೀಳುವ ಘಟನೆಗಳು ಹೆಚ್ಚುತ್ತಿವೆ. ಇದಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಟ್ವೀಟ್‌ ಮಾಡಿದ್ದಾರೆ. 

ಇದನ್ನೂ ಓದಿ: ಮಕ್ಕಳೆಂದು ಪರಿಗಣಿಸಬೇಡಿ- ಸೆಹ್ವಾಗ್‌ಗೆ ವಿಡೀಯೋ ಮೂಲಕ ಹೇಡನ್ ತಿರುಗೇಟು!

ಇದಕ್ಕೆ ಪ್ರತಿಕ್ರಿಯಿಸಿರುವ ಭಾರತದ ಸ್ಪಿನ್ನರ್‌ ಆರ್‌.ಅಶ್ವಿನ್‌, ‘2011ರಿಂದಲೂ ನಾನು ಮಾಸ್ಕ್‌ಗೆ ಬೇಡಿಕೆ ಇಡುತ್ತಿದ್ದೇನೆ’ ಎಂದಿದ್ದಾರೆ. ಹೀಗಾಗಿ ಭಾರತೀಯರ ಬೌಲರ್‌ಗಳು ಇದೀಗ ಮಾಸ್ಕ್‌ಗೆ ಬೇಡಿಕೆ ಇಟ್ಟಿದ್ದಾರೆ. ಕಳೆದ 10 ವರ್ಷಗಳಿಂದ ಬೌಲರ್‌ಗಳು ಈ ಬೇಡಿಕೆ ಇಟ್ಟಿದ್ದಾರೆ. ಆದರೆ ಇದುವರೆಗೂ ಅನುಮತಿ ಸಿಕ್ಕಿಲ್ಲ.

ಇದನ್ನೂ ಓದಿ: ಇರಾನಿ ಟ್ರೋಫಿ ಗೆದ್ದ ವಿದರ್ಭ- ಹುತಾತ್ಮ ಯೋಧರ ಕುಟಂಬಕ್ಕೆ ಬಹುಮಾನ ಮೊತ್ತ !