ಮತ್ತೊಂದು ಕ್ವಾರ್ಟರ್‌'ಫೈನಲ್'ನಲ್ಲಿ ಜಪಾನ್‌'ನ ಕಾಂಟಾ ತ್ಸುನಿಯಮಾ ವಿರುದ್ಧ 10-21, 21-15, 21-18 ಗೇಮ್‌'ಗಳ ಅಂತರದಿಂದ ಗೆಲುವು ಸಾಧಿಸುವ ಮೂಲಕ ಪ್ರಣಯ್ ನಾಲ್ಕರ ಘಟ್ಟ ಪ್ರವೇಶಿಸಿದರು.

ಅನಾಹೀಮ್(ಯುಎಸ್): ಭಾರತದ ಸ್ಟಾರ್ ಶಟ್ಲರ್ ಪಿ. ಕಶ್ಯಪ್ ಮತ್ತು ಎಚ್.ಎಸ್. ಪ್ರಣಯ್, ಯುಎಸ್ ಓಪನ್ ಗ್ರ್ಯಾನ್ ಪ್ರೀ ಗೋಲ್ಡ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.

ಇಂದು ನಡೆದ ಕ್ವಾರ್ಟರ್‌'ಫೈನಲ್‌'ನಲ್ಲಿ ಭಾರತದವರೇ ಆದ ಸಮೀರ್‌'ರನ್ನು 21-13,21-16 ನೇರ ಗೇಮ್‌'ಗಳಿಂದ ಸೋಲಿಸುವ ಮೂಲಕ ಕಶ್ಯಪ್ ಸೆಮೀಸ್‌ಗೇರಿದರು. ಮುಂದಿನ ಹಂತದಲ್ಲಿ ಕಶ್ಯಪ್, ಕೊರಿಯಾದ ಕ್ವಾಂಗ್ ಹೀ ಹಿಯೊ ಸವಾಲನ್ನು ಎದುರಿಸಲಿದ್ದಾರೆ.

ಇನ್ನು ಮತ್ತೊಂದು ಕ್ವಾರ್ಟರ್‌'ಫೈನಲ್'ನಲ್ಲಿ ಜಪಾನ್‌'ನ ಕಾಂಟಾ ತ್ಸುನಿಯಮಾ ವಿರುದ್ಧ 10-21, 21-15, 21-18 ಗೇಮ್‌'ಗಳ ಅಂತರದಿಂದ ಗೆಲುವು ಸಾಧಿಸುವ ಮೂಲಕ ಪ್ರಣಯ್ ನಾಲ್ಕರ ಘಟ್ಟ ಪ್ರವೇಶಿಸಿದರು. ಸೆಮೀಸ್‌'ನಲ್ಲಿ ಪ್ರಣಯ್, ವಿಯೆಟ್ನಾಂನ ತೈನ್ ಮಿಗ್ ಗುಯೆನ್ ವಿರುದ್ಧ ಸೆಣಸಲಿದ್ದಾರೆ.

ಬ್ಯಾಡ್ಮಿಂಟನ್ ಡಬಲ್ಸ್‌ ವಿಭಾಗದಲ್ಲಿ ಜಪಾನ್‌'ನ ಹಿರೊಕಿ ಒಕುಮುರ ಹಾಗೂ ಮಾಸಾಯುಕಿ ಒನೊಡೆರಾ ಜೋಡಿಯನ್ನು 21-18, 22-20 ಗೇಮ್‌'ಗಳಿಂದ ಮಣಿಸಿದ ಭಾರತದ ಮನು ಅತ್ರಿ ಹಾಗೂ ಸಮಿತ್ ರೆಡ್ಡಿ ಜೋಡಿ ಸಹ ಸೆಮಿಫೈನಲ್ ಪ್ರವೇಶಿಸಿತು. ನಾಲ್ಕರ ಘಟ್ಟದಲ್ಲಿ ಭಾರತದ ಜೋಡಿ ಚೈನಾ ತೈಪೆಯ ಅಗ್ರ ಶ್ರೇಯಾಂಕಿತ ಜೋಡಿ ಲೂ ಚಿಂಗ್ ಯೂ ಹಾಗೂ ಯಂಗ್ ಪೂ ಹ್ಯುನ ಎದುರು ಸೆಣಸಲಿದೆ.