ಕಳೆದ ತಿಂಗಳು ಹೊರಬಂದಿದ್ದ ವಿಡಿಯೋವೊಂದರಲ್ಲಿ 27 ವರ್ಷದ ಸ್ಮಿತ್, ಇಸ್ಮಾಂ ಧರ್ಮೀಯರಿಗೆ ನೋವಾಗುವಂತೆ ನಡೆದುಕೊಂಡಿದ್ದರು.

ಲಂಡನ್​(ನ.02): ಒಲಂಪಿಕ್ಸ್ ಪದಕ ವಿಜೇತ ಲೂಯಿಸ್ ಸ್ಮಿತ್ ವಿರುದ್ಧ ಇಸ್ಲಾಂ ಧರ್ಮದ ಬಗ್ಗೆ ಅಪಹಾಸ್ಯ ಮಾಡಿದ ಆರೋಪ ಕೇಳಿ ಬಂದಿದೆ.

Add Asianetnews Kannada as a Preferred SourcegooglePreferred

ಈ ಹಿನ್ನೆಲೆಯಲ್ಲಿ ಬ್ರಿಟನ್ ಜಿಮ್ನಾಸ್ಟಿಕ್ಸ್ ಸಂಸ್ಥೆ, ಸ್ಮಿತ್ ವಿರುದ್ಧ ಶಿಸ್ತು ಕ್ರಮ ಕೈಗೊಂಡಿದೆ. ಎರಡು ತಿಂಗಳ ಕಾಲ ನಿಷೇಧ ಹೇರಿದೆ. 

ಕಳೆದ ತಿಂಗಳು ಹೊರಬಂದಿದ್ದ ವಿಡಿಯೋವೊಂದರಲ್ಲಿ 27 ವರ್ಷದ ಸ್ಮಿತ್, ಇಸ್ಮಾಂ ಧರ್ಮೀಯರಿಗೆ ನೋವಾಗುವಂತೆ ನಡೆದುಕೊಂಡಿದ್ದರು. ಮೊದಲು ನಮಾಜ್ ಮಾಡುವ ಸ್ಮಿತ್ ನಂತರ ಅಲ್ಲಾ - ಹೂ-ಅಕ್ಬರ್ ಅಂತಾ ಜೋರಾಗಿ ಕೂಗಿದ್ದರು. 

ಸಹೋದ್ಯೋಗಿ ಲ್ಯೂಕ್ ಕಾರ್ಸನ್, ಸ್ಮಿತ್ ಹಿಂದೆ ನಿಂತು ತಮಾಷೆ ಮಾಡ್ತಿದ್ದರು. ಈ ವಿಡಿಯೋ ವೈರಲ್ ಆದ ನಂತರ ಸ್ಮಿತ್ ಈ ಬಗ್ಗೆ ಕ್ಷಮೆ ಕೂಡ ಕೇಳಿದ್ದರು.