ಜೋಯ್'ದೀಪ್ 2012ರ ಲಂಡನ್ ಒಲಿಂಪಿಕ್'ನಲ್ಲಿ ಶೂಟಿಂಗ್ ವಿಭಾಗದಲ್ಲಿ ಕೂದಲೆಳೆಯಂತರದಲ್ಲಿ ಕಂಚಿನ ಪದಕ ವಂಚಿತರಾಗಿದ್ದರು.

ಬೆಂಗಳೂರು(ಜು.11): ನಿನ್ನೆಯಷ್ಟೇ ಅಮರನಾಥ ಯಾತ್ರಿಕರ ಮೇಲೆ ಭಯೋತ್ಫಾದಕರು ನಡೆಸಿದ ಅಮಾನವೀಯ ದಾಳಿಯಲ್ಲಿ ಏಳು ಜನ ಮೃತಪಟ್ಟು ಡಜನ್'ಗೂ ಹೆಚ್ಚು ಜನ ಗಾಯಗೊಂಡಿದ್ದಾರೆ.

ಉಗ್ರರ ಈ ದಾಳಿಯನ್ನು ಇಡೀ ದೇಶವೇ ಒಕ್ಕೋರಿನಿಂದ ಖಂಡಿಸಿದ್ದು ಮಾತ್ರವಲ್ಲದೇ, ಮೃತ ಯಾತ್ರಿಕ ಕುಟುಂಬದವರ ಜೊತೆ ನಾವಿದ್ದೇವೆ ಎಂಬಂತಹ ಸಾಂತ್ವನದ ಮಾತುಗಳನ್ನು ಆಡಿದ್ದಾರೆ.

ಇದೇವೇಳೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅಮರನಾಥ ಯಾತ್ರೀಕರ ಮೇಲಿನ ದಾಳಿಯನ್ನು ಖಂಡಿಸಿದ್ದು, ಮೃತ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಆ ಕುಟುಂಬಕ್ಕೆ ದೇವರು ನೀಡಲಿ ಎಂಬರ್ಥದಲ್ಲಿ ಟ್ವೀಟ್ ಮಾಡಿದ್ದರು.

Scroll to load tweet…

ಈ ಟ್ವೀಟ್'ಗೆ ವ್ಯಂಗ್ಯವಾಗಿ ಪ್ರತಿಕ್ರಿಯಿಸಿರುವ ಒಲಿಂಪಿಯನ್ ಶೂಟರ್ ಜೋಯ್'ದೀಪ್ ಕರ್ಮಾಕರ್, ಎಷ್ಟು ವ್ಯಾಕರಣಬದ್ಧವಾಗಿ ಟ್ವೀಟ್ ಮಾಡಿದ್ದೀರ... ನೀವು ಭಾರತ ರತ್ನ ಪಡೆದಿದ್ದರಲ್ಲಿ ಯಾವುದೇ ಆಶ್ಚರ್ಯವಿಲ್ಲ ಎಂದು ರೀಟ್ವೀಟ್ ಮಾಡಿದ್ದಾರೆ.

Scroll to load tweet…

ಜೋಯ್'ದೀಪ್ 2012ರ ಲಂಡನ್ ಒಲಿಂಪಿಕ್'ನಲ್ಲಿ ಶೂಟಿಂಗ್ ವಿಭಾಗದಲ್ಲಿ ಕೂದಲೆಳೆಯಂತರದಲ್ಲಿ ಕಂಚಿನ ಪದಕ ವಂಚಿತರಾಗಿದ್ದರು.