2019ರ ವಿಶ್ವಕಪ್ ಟೂರ್ನಿಗೆ ಸಜ್ಜಾಗುತ್ತಿರುವ ತಂಡಗಳಲ್ಲಿ ಅತ್ಯುತ್ತಮ ಸ್ಪಿನ್ ವಿಭಾಗವನ್ನ ಹೊಂದಿರೋ ತಂಡ ಯಾವುದು? ಸ್ಪಿನ್ ಬೌಲಿಂಗ್‌ನಲ್ಲೇ ಪಂದ್ಯದ ಗತಿಯನ್ನ ಬದಲಾಯಿಸಬಲ್ಲ ತಂಡದ ಕುರಿತ ಮಾಹಿತಿ ಇಲ್ಲಿದೆ.
ಬೆಂಗಳೂರು(ಜೂ.18): ಬಲಿಷ್ಠ ತಂಡವನ್ನ ಕಣಕ್ಕಿಳಿಸಿ ಕ್ರಿಕೆಟ್ ವಿಶ್ವಕಪ್ ಗೆಲ್ಲಲು ಪ್ರಯತ್ನಿಸಲಿದೆ. ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್ ಮೂರು ವಿಭಾಗಗಳು ಅಷ್ಟೇ ಮುಖ್ಯ. 2019ರ ವಿಶ್ವಕಪ್ ಇಂಗ್ಲೆಂಡ್‌ನಲ್ಲಿ ನಡೆಯಲಿದೆ. ಹೀಗಾಗಿ ಇಲ್ಲಿನ ಪಿಚ್‌ಗಳು ವೇಗಿಗಳಿಗೆ ಹೆಚ್ಚು ನೆರವು ನೀಡಲಿದೆ. ಜೊತೆ ಸ್ಪಿನ್ನರ್‌ಗಳು ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ.
ಮುಂದಿನ ವಿಶ್ವಕಪ್ ಟೂರ್ನಿಯಲ್ಲಿ ಆಡೋ ತಂಡಗಳಲ್ಲಿ ಯಾವ ತಂಡ ಬಲಿಷ್ಠ ಸ್ಪಿನ್ ವಿಭಾಗ ಹೊಂದಿದೆ ಅನ್ನೋ ಕುತೂಹಲಕ್ಕೆ ಇಲ್ಲಿದೆ ಉತ್ತರ ಅತ್ಯುತ್ತಮ ಸ್ಪಿನ್ನರ್‌ಗಳನ್ನ ಹೊಂದಿರುವ ನಾಲ್ಕು ತಂಡಗಳ ವಿವರ ಇಲ್ಲಿದೆ.
ಭಾರತ:
ಸ್ಪಿನ್ನರ್‌ಗಳು ಯಾವುತ್ತೂ ಭಾರತದ ಶಕ್ತಿ. ಸದ್ಯ ನಿಗಧಿತ ಓವರ್ ಕ್ರಿಕೆಟ್‌ನಲ್ಲಿ ಕುಲದೀಪ್ ಯಾದವ್ ಹಾಗೂ ಯಜುವೇಂದ್ರ ಚೆಹಾಲ್ ಮಿಂಚಿನ ಪ್ರದರ್ಶನ ನೀಡುತ್ತಿದ್ದಾರೆ. ಹೀಗಾಗಿ ಹಿರಿಯ ಸ್ಪಿನ್ನರ್‌ಗಳಾದ ಆರ್ ಅಶ್ವಿನ್ ಹಾಗೂ ರವೀಂದ್ರ ಜಡೇಜಾ ಟೆಸ್ಟ್ ಪಂದ್ಯಕ್ಕೆ ಸೀಮಿತವಾಗಿದ್ದಾರೆ. ಇನ್ನು ಅಕ್ಸರ್ ಪಟೇಲ್ ಕೂಡ ಲಭ್ಯರಿದ್ದಾರೆ. ಆದರೆ ಇಂಗ್ಲೆಂಡ್ ಪಿಚ್‌ಗೆ ಯಾರನ್ನ ಆಯ್ಕೆ ಮಾಡಬೇಕು ಅನ್ನೋದು ಆಯ್ಕೆ ಸಮಿತಿ ನಿರ್ಧರಿಸಲಿದೆ.
ಪಾಕಿಸ್ತಾನ:
ಭಾರತದ ರೀತಿಯಲ್ಲೇ ಪಾಕಿಸ್ತಾನ ಕೂಡ ಅತ್ಯುತ್ತಮ ಸ್ಪಿನ್ನರ್‌ಗಳನ್ನ ಹೊಂದಿದೆ. ಸದ್ಯ ಯಾಸಿರ್ ಶಾ, ಇಮಾದ್ ವಾಸಿಮ್ ಹಾಗೂ ಶದಬ್ ಖಾನ್ ಪಾಕ್ ಪರ ನಿಗಧಿತ ಓವರ್ ಕ್ರಿಕೆಟ್‌ನಲ್ಲಿ ಮಿಂಚಿದ್ದಾರೆ. ಹೀಗಾಗಿ ಮುಂಬರುವ ವಿಶ್ವಕಪ್ ಟೂರ್ನಿಯಲ್ಲೂ ಈ ಸ್ಪಿನ್ನರ್‌ಗಳು ಮೋಡಿ ಮಾಡಿದರೆ, ಚಾಂಪಿಯನ್ಸ್ ಟ್ರೋಫಿ ರೀತಿಯಲ್ಲೇ ವಿಶ್ವಕಪ್ ಕೂಡ ಪಾಕ್ ಪಾಲಾಗಲಿದೆ.
ಇಂಗ್ಲೆಂಡ್:
2019ರ ವಿಶ್ವಕಪ್‌ಗೆ ಆತಿಥ್ಯವಹಿಸಿರು ಇಂಗ್ಲೆಂಡ್ ತಂಡದಲ್ಲೂ ಡಿಸೆಂಟ್ ಸ್ಪಿನ್ ಬೌಲರ್‌ಗಳಿದ್ದಾರೆ. ಆದಿಲ್ ರಶೀದ್ ಹಾಗೂ ಮೋಯಿನ್ ಆಲಿ ಒಳಗೊಂಡ ಇಂಗ್ಲೆಂಡ್ ತಂಡ ಎದುರಾಳಿಕೆ ಸಂಕಷ್ಟ ಕೊಡಬಲ್ಲದು.
ಅಫ್ಘಾನಿಸ್ತಾನ:
ನಿಗಧಿತ ಓವರ್ ಕ್ರಿಕೆಟ್‌ನಲ್ಲಿ ಮಿಂಚಿನ ವೇಗದಲ್ಲಿ ಬೆಳೆಯುತ್ತಿರುವ ಅಫ್ಘಾನಿಸ್ತಾನದ ಪ್ರಮುಖ ಶಕ್ತಿ ಸ್ಪಿನ್ನರ್ಸ್. ರಶೀದ್ ಖಾನ್, ಮಜೀಬ್ ಯುಆರ್ ರೆಹಮಾನ್ ಹಾಗೂ ಮೊಹಮ್ಮದ್ ನಬಿ ಬ್ಯಾಟ್ಸ್‌ಮನ್‌ಗಳನ್ನ ಪೆವಿಲಿಯನ್‌ಗಟ್ಟೋ ಸಾಮರ್ಥ್ಯ ಹೊಂದಿದ್ದಾರೆ.
