ವಿಂಬಲ್ಡನ್ 2018: ನಡಾಲ್ ಮಣಿಸಿ ಫೈನಲ್ ಪ್ರವೇಶಿಸಿದ ಜೊಕೊವಿಚ್

https://static.asianetnews.com/images/authors/2c1b126a-9adf-5f82-ae4f-e781463685fe.jpg
First Published 14, Jul 2018, 9:04 PM IST
Novak Djokovic beats Rafael Nadal in epic five-setter to enter 5th final
Highlights

ವಿಂಬಲ್ಡನ್ ಟೂರ್ನಿಯ ಸೆಮಿಫೈನಲ್ ಹೋರಾಟದಲ್ಲಿ ರಾಫೆಲ್ ನಡಾಲ್ ಹಾಗೂ ನೊವಾಕ್ ಜೊಕೊವಿಚ್ ಹೋರಾಟ ಅಭಿಮಾನಿಗಳನ್ನ ತುದಿಗಾಲಲ್ಲಿ ನಿಲ್ಲಿಸಿತ್ತು. ಈ ರೋಚಕ ಹೋರಾಟದಲ್ಲಿ ಜೊಕೊವಿಚ್ ಗೆಲುವಿನ ಸಿಹಿ ಕಂಡಿದ್ದಾರೆ. ಈ ಸೆಮಿಫೈನಲ್ ಹೋರಾಟದ ಡಿಟೇಲ್ಸ್ ಇಲ್ಲಿದೆ.

ಲಂಡನ್(ಜು.14): ಪ್ರತಿಷ್ಠಿತ ವಿಂಬಲ್ಡನ್ ಒಪನ್ ಟೂರ್ನಿಯಲ್ಲಿ ದಿಗ್ಗಜ ರಾಫೆಲ್ ನಡಾಲ್ ಹೋರಾಟ ಅಂತ್ಯಗೊಂಡಿದೆ. ನಡಾಲ್ ವಿರುದ್ಧದ ಸೆಮಿಫೈನಲ್ ಹೋರಾಟದಲ್ಲಿ ಸರ್ಬಿಯಾದ ನೊವಾಕ್ ಜೊಕೊವಿಚ್ ಗೆಲುವು ಸಾಧಿಸಿದ್ದಾರೆ.

ಶುಕ್ರವಾರದಿಂದ ಶನಿವಾರಕ್ಕೆ ಮುಂದುವರಿದ ಸೆಮೀಸ್ ಹೋರಾಟ ಅಭಿಮಾನಿಗಳಿ ಸಾಕಷ್ಟು ಕುತೂಹಲ ಮೂಡಿಸಿತ್ತು. ರೋಚಕ ಹೋರಾಟದಲ್ಲಿ ವಿಶ್ವದ ನಂ.1 ಟೆನಿಸ್ ಪಟು, ಸ್ಪೇನ್‌ನ ರಾಫೆಲ್ ನಡಾಲ್ ವಿರುದ್ಧ 6-4, 3-6, 7-6(11/9) 3-6 ಹಾಗೂ 10-8 ಅಂತರದಲ್ಲಿ ಜೊಕೊವಿಚ್ ಗೆಲುವಿನ ನೆಗ ಬೀರಿದರು.

ರೋಚಕ ಗೆಲುವಿನ ಮೂಲಕ ಜೊಕೊವಿಚ್ ವಿಂಬಲ್ಡನ್ ಟೂರ್ನಿಯ ಫೈನಲ್ ಪ್ರವೇಶಿಸಿದರು. ಭಾನುವಾರ(ಜು.15) ನಡೆಯಲಿರುವ ಫೈನಲ್ ಪಂದ್ಯದಲ್ಲಿ ಜೊಕೊವಿಚ್, ದಕ್ಷಿಣ ಆಫ್ರಿಕಾದ ಕೆವಿನ್ ಆಂಡ್ರೆಸನ್ ವಿರುದ್ಧ ಪ್ರಶಸ್ತಿಗಾಗಿ ಹೋರಾಟ ನಡೆಸಲಿದ್ದಾರೆ.
 

loader