ಎಟಿಪಿ ವರ್ಲ್ಡ್ ಟೂರ್ ಫೈನಲ್ಸ್ ಟೆನಿಸ್ ಟೂರ್ನಿಯಲ್ಲಿ ಸೆಮಿಫೈನಲ್ ಪಂದ್ಯದಲ್ಲಿ ಜೋಕೊವಿಚ್, ಫ್ರಾನ್ಸ್'ನ ಗೀಲ್ ಮೊನಿಲ್ಸ್ ಎದುರು ಸೆಣಸಲಿದ್ದಾರೆ.

ಲಂಡನ್(ನ.16): ವಿಶ್ವದ ಸ್ಟಾರ್ ಟೆನಿಸಿಗ ಸರ್ಬಿಯಾದ ನೊವಾಕ್ ಜೋಕೊವಿಚ್, ಎಟಿಪಿ ವರ್ಲ್ಡ್ ಟೂರ್ ಫೈನಲ್ಸ್ ಟೆನಿಸ್ ಟೂರ್ನಿಯಲ್ಲಿ ಸೆಮಿಫೈನಲ್ ಹಂತಕ್ಕೇರಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇಲ್ಲಿನ ಒ2 ಅರೇನಾದಲ್ಲಿ ಮಂಗಳವಾರ ತಡರಾತ್ರಿ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಕ್ವಾರ್ಟರ್‌ ಫೈನಲ್ ಪಂದ್ಯದಲ್ಲಿ ಜೋಕೊವಿಚ್ 7-6(6), 7-6(5)ಸೆಟ್‌ಗಳಿಂದ ಕೆನಡಾದ ಮಿಲೊಸ್ ರೋನಿಕ್ ಎದುರು ಗೆಲುವು ಸಾಧಿಸಿದರು.

ಪಂದ್ಯದುದ್ದಕ್ಕೂ ನಡೆದ ರೋಚಕ ಹಣಾಹಣಿಯಲ್ಲಿ ಜೋಕೊವಿಚ್ ಟೈಬ್ರೇಕರ್ ಅವಕಾಶದಲ್ಲಿ ಅಂಕಗಳನ್ನು ಹೆಚ್ಚಿಸಿಕೊಂಡು ಎರಡು ಸೆಟ್‌ಗಳಲ್ಲಿ ತಲಾ 1 ಅಂಕದ ಮುನ್ನಡೆ ಪಡೆದು ಜಯ ಸಾಧಿಸಿದರು.

ಮುಂದಿನ ಸುತ್ತಿನಲ್ಲಿ ಜೋಕೊವಿಚ್, ಫ್ರಾನ್ಸ್'ನ ಗೀಲ್ ಮೊನಿಲ್ಸ್ ಎದುರು ಸೆಣಸಲಿದ್ದಾರೆ.