40 ವರ್ಷಗಳಿಂದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಿಚ್ ಬದಲಾಯಿಸಿಲ್ಲ.
ಬೆಂಗಳೂರು(ಸೆ.21): ಭಾರತ-ಆಸ್ಟ್ರೇಲಿಯಾ ನಡುವಿನ ಏಕದಿನ(ಸೆ.28) ಪಂದ್ಯದ ಬಳಿಕ ಹೊಸ ಪಿಚ್ ನಿರ್ಮಾಣ ಕಾರ್ಯ ಆರಂ‘ವಾಗಲಿರುವ ಕಾರಣ, ಚಿನ್ನಸ್ವಾಮಿಯಲ್ಲಿ ಸತತ 2ನೇ ವರ್ಷ ರಣಜಿ ಪಂದ್ಯಗಳು ನಡೆಯುವುದಿಲ್ಲ.
ಕಳೆದ ವರ್ಷ ಸಬ್-ಏರ್ ವ್ಯವಸ್ಥೆ ಸಿದ್ಧಪಡಿಸುವ ಸಲುವಾಗಿ ಇಲ್ಲಿ ಯಾವುದೇ ಪಂದ್ಯ ನಡೆದಿರಲಿಲ್ಲ. ಈ ಋತುವಿನಲ್ಲಿ ಕರ್ನಾಟಕ ತಂಡ ತವರಿನಲ್ಲಿ 2 ಪಂದ್ಯಗಳನ್ನು ಆಡಲಿದ್ದು, ಬೆಂಗಳೂರು ಆತಿಥ್ಯ ಕಳೆದುಕೊಳ್ಳಲಿದೆ. 40 ವರ್ಷಗಳಿಂದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಿಚ್ ಬದಲಾಯಿಸಿಲ್ಲ.
