ಅನಿಲ್ ಕುಂಬ್ಳೆ ಕೋಚ್ ಹುದ್ದೆಗೆ ರಾಜೀನಾಮೆ ನೀಡುತ್ತಿದ್ದಂತೆ, ವಿರಾಟ್ ಕೊಹ್ಲಿ ಹಾಗೂ ಕುಂಬ್ಳೆ ನಡುವೆ ಎಲ್ಲವೂ ಸರಿಯಿಲ್ಲ. ಇಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಿದೆ ಎಂಬ ವದಂತಿಗಳು ಹರಿದಾಡ ತೊಡಗಿದ್ದವು.

ನವದೆಹಲಿ(ಜು.02): ಚಾಂಪಿಯನ್ಸ್ ಟ್ರೋಫಿ ಸಮಯದಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಮಾಜಿ ಕೋಚ್ ಅನಿಲ್ ಕುಂಬ್ಳೆ ನಡುವೆ ಯಾವುದೇ ಭಿನ್ನಾಭಿಪ್ರಾಯ ಉಂಟಾಗಿರಲಿಲ್ಲ ಎಂದು ತಂಡದ ಮ್ಯಾನೇಜರ್ ಕಪಿಲ್ ಮಲ್ಹೋತ್ರಾ ಸ್ಪಷ್ಟಪಡಿಸಿದ್ದಾರೆ.

ಭಾರತ ತವರಿನಲ್ಲಾಗಲೀ ಅಥವಾ ವಿದೇಶದಲ್ಲಾಗಲಿ ಯಾವುದೇ ಪಂದ್ಯಾವಳಿ ಅಥವಾ ಸರಣಿಯನ್ನಾಡಿದ ಬಳಿಕ ತಂಡದ ಮ್ಯಾನೇಜರ್ ಸಾಮಾನ್ಯವಾಗಿ ವರದಿ ನೀಡುತ್ತಾರೆ. ಇದೀಗ ಚಾಂಪಿಯನ್ಸ್ ಟ್ರೋಫಿ ವೇಳೆ ತಂಡದ ಕುರಿತು ಮಲ್ಹೋತ್ರಾ ವರದಿ ಸಲ್ಲಿಸಿದ್ದು, ಕುಂಬ್ಳೆ ಹಾಗೂ ಕೊಹ್ಲಿ ನಡುವೆ ಯಾವುದೇ ಅಹಿತಕರ ಘಟನೆ ನಡೆದಿಲ್ಲ ಎಂದು ಉಲ್ಲೇಖಿಸಿದ್ದಾರೆ.

ಅನಿಲ್ ಕುಂಬ್ಳೆ ಕೋಚ್ ಹುದ್ದೆಗೆ ರಾಜೀನಾಮೆ ನೀಡುತ್ತಿದ್ದಂತೆ, ವಿರಾಟ್ ಕೊಹ್ಲಿ ಹಾಗೂ ಕುಂಬ್ಳೆ ನಡುವೆ ಎಲ್ಲವೂ ಸರಿಯಿಲ್ಲ. ಇಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಿದೆ ಎಂಬ ವದಂತಿಗಳು ಹರಿದಾಡ ತೊಡಗಿದ್ದವು. ಈ ಸಂಬಂಧ ‘ಕಪಿಲ್ ಮಲ್ಹೋತ್ರ ವರದಿ ಸಲ್ಲಿಸಿದ್ದರು. ವರದಿಯಲ್ಲಿ ಕನಿಷ್ಠ ಕೊಹ್ಲಿ, ಅನಿಲ್ ಕುಂಬ್ಳೆ ಅವರೊಂದಿಗೆ ಕನಿಷ್ಠ ಒರಟಾಗಿಯೂ ನಡೆದುಕೊಂಡಿಲ್ಲವೆಂದು ವರದಿಯಲ್ಲಿ ಮಲ್ಹೋತ್ರ ತಿಳಿಸಿದ್ದಾರೆ’ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.