ಯುವ ವೇಗಿ ಲುಂಗಿಸನಿ ಎನ್'ಗಿಡಿ ಏಕದಿನ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಸೆಂಚೂರಿಯನ್ ಟೆಸ್ಟ್'ನಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್'ಗೆ ಪದಾರ್ಪಣೆ ಮಾಡಿದ ಪಂದ್ಯದಲ್ಲಿಯೇ 7 ವಿಕೆಟ್ ಕಬಳಿಸಿ ಪಂದ್ಯ ಪುರುಷೋತ್ತಮ ಪ್ರಶಸ್ತಿ ಗಿಟ್ಟಿಸಿಕೊಂಡಿದ್ದರು.
ಜೋಹಾನ್ಸ್'ಬರ್ಗ್(ಜ.25): ಭಾರತ ವಿರುದ್ಧದ 6 ಪಂದ್ಯಗಳ ಏಕದಿನ ಸರಣಿಗೆ 15 ಆಟಗಾರರನ್ನೊಳಗೊಂಡ ದಕ್ಷಿಣ ಆಫ್ರಿಕಾ ತಂಡವನ್ನು ಪ್ರಕಟಿಸಲಾಗಿದ್ದು, ಯುವ ವೇಗಿ ಲುಂಗಿಸನಿ ಎನ್'ಗಿಡಿ ಏಕದಿನ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಸೆಂಚೂರಿಯನ್ ಟೆಸ್ಟ್'ನಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್'ಗೆ ಪದಾರ್ಪಣೆ ಮಾಡಿದ ಪಂದ್ಯದಲ್ಲಿಯೇ 7 ವಿಕೆಟ್ ಕಬಳಿಸಿ ಪಂದ್ಯ ಪುರುಷೋತ್ತಮ ಪ್ರಶಸ್ತಿ ಗಿಟ್ಟಿಸಿಕೊಂಡಿದ್ದರು.
ಡರ್ಬನ್'ನಲ್ಲಿ ಫೆಬ್ರವರಿ 1 ರಿಂದ ಸರಣಿ ಆರಂಭಗೊಳ್ಳಲಿದ್ದು, ವೇಗಿ ಮೊರ್ನೆ ಮಾರ್ಕೆಲ್, ಆಲ್ರೌಂಡರ್ ಕ್ರೀಸ್ ಮೋರಿಸ್ ಏಕದಿನ ತಂಡಕ್ಕೆ ಮರಳಿದ್ದಾರೆ. ಇಬ್ಬರು ಲೆಗ್ ಸ್ಪಿನ್ನರ್'ಗಳಾದ ಇಮ್ರಾನ್ ತಾಹೀರ್ ಹಾಗೂ ಚೈನಾಮನ್ ಬೌಲರ್ ತಬ್ರಿಸ್ ಶಂಸಿ ತಂಡವನ್ನು ಕೂಡಿಕೊಂಡಿದ್ದಾರೆ.
ತಂಡ: ಫಾಫ್ ಡು ಪ್ಲೆಸಿಸ್ (ನಾಯಕ), ಹಾಶೀಂ ಆಮ್ಲಾ, ಕ್ವಿಂಟನ್ ಡಿ ಕಾಕ್, ಎಬಿ ಡಿವಿಲಿಯರ್ಸ್, ಜೆಪಿ ಡುಮಿನಿ, ಇಮ್ರಾನ್ ತಾಹೀರ್, ಏಡನ್ ಮಾರ್ಕ್'ರಮ್, ಡೇವಿಡ್ ಮಿಲ್ಲರ್, ಮೊರ್ನೆ ಮಾರ್ಕೆಲ್, ಕ್ರಿಸ್ ಮೋರಿಸ್, ಲುಂಗಿಸನಿ ಎನ್‌ಗಿಡಿ, ಆ್ಯಂಡಿಲೆ ಫೆಲುಕವಾಯೊ, ಕಗಿಸೊ ರಬಾಡ, ತಬ್ರಿಸ್ ಶಂಸಿ, ಖಾಯೆಲಿಹ್ಲಿ ಜೊಂಡೋ.

Last Updated 11, Apr 2018, 1:06 PM IST