ಕ್ಯಾಂಡಿ(ಆ.30): ಶ್ರೀಲಂಕಾ ಪ್ರವಾಸದಲ್ಲಿರುವ ನ್ಯೂಜಿಲೆಂಡ್ ತಂಡ ದ್ವಿತೀಯ ಟೆಸ್ಟ್ ಪಂದ್ಯ ಗೆದ್ದು ಸರಣಿಯನ್ನು 1-1 ಅಂತರದಲ್ಲಿ ಸಮಬಲ ಮಾಡಿಕೊಂಡಿದೆ. ಇದೀಗ 3 ಪಂದ್ಯದ ಟಿ20 ಸರಣಿಗೆ ತಯಾರಿ ಆರಂಭಿಸಿದೆ. ಪಂದ್ಯ ಆರಂಭಕ್ಕೂ ಮುನ್ನ ಶ್ರೀಲಂಕಾದ ಪರ್ವತ ಪ್ರದೇಶದಲ್ಲಿ ತೆರಳುತ್ತಿದ್ದ ಕಿವೀಸ್ ಆಟಗಾರರು ಅಪಾಯದಿಂದ ಪಾರಾಗಿದ್ದಾರೆ.

ಇದನ್ನೂ ಓದಿ: ಲಂಕಾ ಅಭಿಮಾನಿಗಳ ಹೃದಯ ಗೆದ್ದ ಕೇನ್ ವಿಲಿಯಮ್ಸನ್!

ಕ್ಯಾಂಡಿ ಸಮೀಪದ ಪರ್ವತ ಪ್ರದೇಶದಲ್ಲಿ ನ್ಯೂಜಿಲೆಂಡ್ ಕ್ರಿಕೆಟಿಗರನ್ನು ಕರೆದೊಯ್ಯುತ್ತಿದ್ದ ಬಸ್ಸಿನ ಕ್ಲಚ್ ಪ್ಲೇಟ್ ಫೈಲ್ಯೂರ್ ಆಗಿದೆ. ತಕ್ಷಣವೇ ನಿಯಂತ್ರಣಕ್ಕೆ ತೆಗೆದುಕೊಂಡ ಚಾಲಕ ಬಸ್ ನಿಲ್ಲಿಸಿದ್ದಾರೆ. ಆದರೆ ಕಾಡಿನ ನಡುವೆ ಬಸ್ ಕೆಟ್ಟು ನಿಂತ ಕಾರಣ ನ್ಯೂಜಿಲೆಂಡ್ ಕ್ರಿಕೆಟಿಗರು ಪ್ರಯಾಸ ಪಡುವಂತಾಯಿತು.  ಬಳಿಕ ಆ್ಯಂಬುಲೆನ್ಸ್ ಹಾಗೂ ಸೇನಾ ಜೀಪ್‌ ಸಹಾಯದಿಂದ ಕ್ರಿಕೆಟಿಗರು ಹೊಟೆಲ್‌ಗೆ ಮರಳಿದರು.

 

ಇದನ್ನೂ ಓದಿ: ಅನುಮಾನಾಸ್ಪದ ಬೌಲಿಂಗ್ ಮಾಡಿದ ಇಬ್ಬರು ಕ್ರಿಕೆಟಿಗರು..!

ಪೊಲೀಸರ ಸಹಾಯದಿಂದ ಸೇನಾ ವಾಹನ ಹಾಗೂ ಆ್ಯಂಬುಲೆನ್ಸ್ ಹತ್ತಿ ಮತ್ತೆ ಹೊಟೆಲ್‌ಗೆ ಮರಳಿದೆವು ಎಂದು ನ್ಯೂಜಿಲೆಂಡ್ ತಂಡದ ಸಹಾಯಕ ಸಿಬ್ಬಂಧಿ ಹೇಳಿದ್ದಾರೆ. ಲಂಕಾ ವಿರುದ್ದದ ಅಭ್ಯಾಸ ಪಂದ್ಯ ಆಡಿ ಹೊಟೆಲ್‌ಗೆ ಮರಳುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ.