ಪರ್ತ್'ನ ಹೊಸ ಅಂಗಳದಲ್ಲಿ ಭಾರತ-ಆಸೀಸ್ ಟೆಸ್ಟ್

sports | 1/10/2018 | 5:02:00 AM
naveena
Suvarna Web Desk
Highlights

ಆಸೀಸ್ ಹಾಗೂ ಇಂಗ್ಲೆಂಡ್ ನಡುವಿನ ಆ್ಯಷಸ್ ಸರಣಿಯ 3ನೇ ಪಂದ್ಯಕ್ಕೇ ಪರ್ತ್‌'ನ ನೂತನ ಕ್ರೀಡಾಂಗಣ ಆತಿಥ್ಯ ವಹಿಸಬೇಕಾಗಿತ್ತು. ಆದರೆ, ಈ ವೇಳೆಗೆ ಕ್ರೀಡಾಂಗಣ ಸಿದ್ಧಗೊಂಡಿರಲಿಲ್ಲ.

ಸಿಡ್ನಿ(ಜ.10): ಆಸ್ಟ್ರೇಲಿಯಾದ ಪರ್ತ್‌'ನಲ್ಲಿ ನಿರ್ಮಾಣಗೊಂಡಿರುವ ನೂತನ ಕ್ರೀಡಾಂಗಣವು ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಪಂದ್ಯಕ್ಕೆ ಚೊಚ್ಚಲ ಆತಿಥ್ಯ ವಹಿಸಲಿದೆ ಎಂದು ಮೂಲಗಳು ತಿಳಿಸಿವೆ.

ಪರ್ತ್‌'ನಲ್ಲಿ ನೂತನವಾಗಿ ನಿರ್ಮಾಣವಾಗಿರುವ ಕ್ರೀಡಾಂಗಣ ಜ.28ರಂದು ಅಧಿಕೃತವಾಗಿ ಉದ್ಘಾಟನೆಗೊಳ್ಳಲಿದ್ದು, ವರ್ಷಾಂತ್ಯದಲ್ಲಿ ಆಸ್ಟ್ರೇಲಿಯಾ ಹಾಗೂ ಭಾರತ ನಡುವೆ ನಡೆಯಲಿರುವ 4 ಪಂದ್ಯಗಳ ಟೆಸ್ಟ್ ಸರಣಿಯ ಒಂದು ಪಂದ್ಯಕ್ಕೆ ವೇದಿಕೆಯಾಗಲಿದೆ ಎನ್ನಲಾಗಿದೆ.

ಆಸೀಸ್ ಹಾಗೂ ಇಂಗ್ಲೆಂಡ್ ನಡುವಿನ ಆ್ಯಷಸ್ ಸರಣಿಯ 3ನೇ ಪಂದ್ಯಕ್ಕೇ ಪರ್ತ್‌'ನ ನೂತನ ಕ್ರೀಡಾಂಗಣ ಆತಿಥ್ಯ ವಹಿಸಬೇಕಾಗಿತ್ತು. ಆದರೆ, ಈ ವೇಳೆಗೆ ಕ್ರೀಡಾಂಗಣ ಸಿದ್ಧಗೊಂಡಿರಲಿಲ್ಲ.

Comments 0
Add Comment

    Talloywood New Gossip News

    video | 4/12/2018 | 5:37:39 PM
    Chethan Kumar
    Associate Editor