ದುಬೈ(ಮೇ.17): ಐಸಿಸಿ ವಿಶ್ವ ಇಲೆವನ್ ತಂಡಕ್ಕೆ ಆಯ್ಕೆಯಾಗಿರುವ ನೇಪಾಳದ ಯುವ ಸ್ಪಿನ್ನರ್ ಸಂದೀಪ್ ಲಮಿಚ್ಚಾನೆ, ಕ್ರಿಕೆಟ್ ಲೋಕದಲ್ಲಿ ಗಮನ ಸೆಳೆದಿದ್ದಾರೆ. 
ಕಳೆದ ವರ್ಷ ಚಂಡ ಮಾರುತದಿಂದಾಗಿ ಹಾನಿಗೊಳಗಾಗಿರುವ ಕೆರೆಬಿಯನ್ ಕ್ರೀಡಾಂಗಣಗಳ ಶ್ರೇಯೋಭಿವೃದ್ಧಿಗಾಗಿ ದೇಣಿಗೆ ಸಂಗ್ರಹಿಸಲು ಲಂಡನ್‌'ನ ಲಾರ್ಡ್ಸ್ ಅಂಗಳದಲ್ಲಿ ಇದೇ 31ರಂದು ನಡೆಯಲಿರುವ ವೆಸ್ಟ್‌'ಇಂಡೀಸ್ ವಿರುದ್ಧದ ಟಿ20 ಪಂದ್ಯದಲ್ಲಿ ಸಂದೀಪ್ ಪಾಲ್ಗೊಳ್ಳಲಿದ್ದಾರೆ. 
ಲಮಿಚ್ಚಾನೆ ಸದ್ಯ ಐಪಿಎಲ್'ನಲ್ಲಿ ಡೆಲ್ಲಿ ಪರ ಆಡುತ್ತಿದ್ದಾರೆ. ಬಾಂಗ್ಲಾದ ಆಲ್'ರೌಂಡರ್ ಶಕೀಬ್ ಅಲ್ ಹಸನ್ ವೈಯಕ್ತಿಕ ಕಾರಣಗಳಿಂದಾಗಿ ವಿಶ್ವ ಇಲೆವನ್ ತಂಡದಿಂದ ಹಿಂದೆ ಸರಿದ ಕಾರಣ, ಸಂದೀಪ್‌ಗೆ ಸ್ಥಾನ ಸಿಕ್ಕಿದೆ.