ಮಾನ ಉಳಿಸಿಕೊಂಡ ಭಾರತ: 3ನೇ ಟೆಸ್ಟ್'ನಲ್ಲಿ ಗೆಲುವು

ND notch dramatic win deny SA clean sweep
Highlights

52ನೇ ಓವರ್ ಮಾಡಿದ ಇಶಾಂತ್ ಶರ್ಮಾ ಆಮ್ಲಾ ಅವರ ವಿಕೇಟ್ ಕಬಳಿಸಿದರು. 140 ಎಸೆತಗಳಲ್ಲಿ 5 ಬೌಂಡರಿಯೊಂದಿಗೆ 52 ರನ್'ಗಳಿಸಿದ ಆಮ್ಲ ಪಾಂಡ್ಯಗೆ ಕ್ಯಾಚಿತ್ತು ನಿರ್ಗಮಿಸಿದರು.

ಜೋಹಾನ್ಸ್'ಬರ್ಗ್(ಜ.27): ಸರಣಿ ಕೈಬಿಟ್ಟ ಭಾರತ ಮೂರನೇ ಟೆಸ್ಟ್ ಗೆಲುವುದರೊಂದಿಗೆ ಕೊಂಚ ಸಮಾಧಾನಕೊಂಡಿದೆ.

ಶಮಿ, ಬುಮ್ರಾ ಹಾಗೂ ಇಶಾಂತ್ ಶರ್ಮಾ ದಾಳಿಗೆ ಅತಿಥೇಯ ದಕ್ಷಿಣ ಆಫ್ರಿಕಾ ತಂಡ 177 ರನ್'ಗಳಿಗೆ ಆಲೌಟ್ ಆಗಿ  ಭಾರತಕ್ಕೆ 63 ರನ್'ಗಳ ಜಯದ ಕಾಣಿಕೆ ನೀಡಿತು. ಇದರೊಂದಿಗೆ ಹರಿಣಿ ಪಡೆ 2-1 ಸರಣಿಯನ್ನು ತನ್ನದಾಗಿಸಿಕೊಂಡಿತು.

ಮೂರನೇ ದಿನದಾಟದ ಕೊನೆಗೆ ಒಂದು ವಿಕೇಟ್ ಕಳೆದುಕೊಂಡಿದ್ದ ದಕ್ಷಿಣ ಆಫ್ರಿಕಾ ತಂಡಕ್ಕೆ ಎಲ್ಗರ್ ಹಾಗೂ ಆಮ್ಲ ಅವರ 119 ರನ್'ಗಳ 2ನೇ ವಿಕೇಟ್ ಜೊತೆಯಾಟ ಟೀಂ ಇಂಡಿಯಾಕ್ಕೆ ಸೋಲಿನ ಆತಂಕ ಮೂಡಸಿತ್ತು.  52ನೇ ಓವರ್ ಮಾಡಿದ ಇಶಾಂತ್ ಶರ್ಮಾ ಆಮ್ಲಾ ಅವರ ವಿಕೇಟ್ ಕಬಳಿಸಿದರು. 140 ಎಸೆತಗಳಲ್ಲಿ 5 ಬೌಂಡರಿಯೊಂದಿಗೆ 52 ರನ್'ಗಳಿಸಿದ ಆಮ್ಲ ಪಾಂಡ್ಯಗೆ ಕ್ಯಾಚಿತ್ತು ನಿರ್ಗಮಿಸಿದರು.

ಇದರೊಂದಿಗೆ ದಕ್ಷಿಣ ಆಫ್ರಿಕಾದ ಗೆಲುವಿನ ಕನಸು ಸಂಪೂರ್ಣ ಕಮರಿ ಹೋಯಿತು. ನಂತರ ಕ್ರಿಸ್'ಗೆ ಬಂದ ಯಾವುದೇ ಬ್ಯಾಟ್ಸ್'ಮೆನ್'ಗಳು ಶಮಿ, ಮುಬ್ರಾ ಹಾಗೂ ಇಶಾಂತ್ ದಾಳಿಗೆ ಹೆಚ್ಚು ಹೊತ್ತು ಉಳಿಯಲಿಲ್ಲ. ಕೊನೆಯವರೆಗೂ ಔಟಾಗದೆ ಉಳಿದಿದ್ದು ಎಲ್ಗರ್ ಮಾತ್ರ 240 ಎಸೆತಗಳನ್ನು ಎದುರಿಸಿದ ಅವರು 9 ಬೌಂಡರಿ ಹಾಗೂ 1 ಸಿಕ್ಸ್'ರ್'ನೊಂದಿಗೆ ಅಜೇಯರಾಗಿ ಉಳಿದರು.

ಭಾರತದ ಪರ ಶಮಿ 28/5, ಬುಮ್ರ  57/2 ಹಾಗೂ ಇಶಾಂತ್ 31/2 ವಿಕೇಟ್ ಪಡೆಯುವುದರ ಮೂಲಕ ದಕ್ಷಿಣ ಆಫ್ರಿಕಾ ಸೋಲಿಗೆ ಕಾರಣಕರ್ತರಾದರು.

ಸ್ಕೋರ್

ಭಾರತ 187 ಹಾಗೂ 247

ದಕ್ಷಿಣ ಆಫ್ರಿಕಾ 194 ಹಾಗೂ 177

ಫಲಿತಾಂಶ: ಭಾರತಕ್ಕೆ 63 ರನ್'ಗಳ ಜಯ

ದಕ್ಷಿಣ ಆಫ್ರಿಕಾಕ್ಕೆ 2-1 ಸರಣಿ ಜಯ               

loader