Asianet Suvarna News Asianet Suvarna News

IPL 2018: ಪಂಜಾಬ್’ಗೆ ಕಠಿಣ ಗುರಿ ನೀಡಿದ ಕೆಕೆಆರ್

ಗೆಲ್ಲಲೇ ಬೇಕಾದ ಒತ್ತಡದಲ್ಲಿ ಕಣಕ್ಕಿಳಿದಿರುವ ಕೆಕೆಆರ್’ಗೆ ನರೈನ್ ಸ್ಫೋಟಕ ಆರಂಭ ಒದಗಿಸಿಕೊಟ್ಟರು. ಕೇವಲ 36 ಎಸೆತಗಳನ್ನು ಎದುರಿಸಿದ ನರೈನ್ 9 ಬೌಂಡರಿ 4 ಸಿಕ್ಸರ್’ಗಳ ನೆರವಿನಿಂದ 75 ರನ್ ಚಚ್ಚಿದರು.

Narine Karthik power Kolkata Knight Riders to 245 for 6

ಇಂದೋರ್(ಮೇ.12): ಸುನಿಲ್ ನರೈನ್[75], ನಾಯಕ ದಿನೇಶ್ ಕಾರ್ತಿಕ್[50] ಸಿಡಿಲಬ್ಬರದ ಬ್ಯಾಟಿಂಗ್ ನೆರವಿನಿಂದ ಕೋಲ್ಕತಾ ನೈಟ್’ರೈಡರ್ಸ್ 245 ರನ್’ಗಳ ಬೃಹತ್ ಮೊತ್ತ ಕಲೆಹಾಕಿದೆ.
ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಕೆಕೆಆರ್ ಭರ್ಜರಿ ಆರಂಭವನ್ನೇ ಪಡೆಯಿತು. ಮೊದಲ ವಿಕೆಟ್’ಗೆ ನರೈನ್-ಲಿನ್ ಜೋಡಿ 5.2 ಓವರ್’ಗಳಲ್ಲಿ 53 ರನ್ ಕಲೆಹಾಕಿತು. ಲಿನ್ 27 ರನ್ ಬಾರಿಸಿ ಆ್ಯಂಡ್ರೋ ಟೈ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. 2ನೇ ವಿಕೆಟ್’ಗೆ ಉತ್ತಪ್ಪ-ನರೈನ್ ಜೋಡಿ 75 ರನ್’ಗಳ ಜತೆಯಾಟವಾಡುವ ಮೂಲಕ ತಂಡವನ್ನು 120ರ ಗಡಿ ದಾಟಿಸಿದರು. ಈ ವೇಳೆ ದಾಳಿಗಿಳಿದ ಆ್ಯಂಡ್ರೋ ಟೈ ಒಂದೇ ಓವರ್’ನಲ್ಲಿ ಈ ಇಬ್ಬರು ಬ್ಯಾಟ್ಸ್’ಮನ್’ಗಳನ್ನು ಬಲಿ ಪಡೆಯುವ ಮೂಲಕ ಕೆಕೆಆರ್’ಗೆ ಶಾಕ್ ನೀಡಿದರು. 
ನಾಲ್ಕನೇ ವಿಕೆಟ್’ಗೆ ಕೆಕೆಆರ್ ಪರ ಮತ್ತೊಂದು ಜತೆಯಾಟ ಮೂಡಿಬಂತು. ಆ್ಯಂಡ್ರೆ ರಸೆಲ್- ದಿನೇಶ್ ಕಾರ್ತಿಕ್ ಜೋಡಿ 31 ಎಸೆತಗಳಲ್ಲಿ 76 ರನ್ ಚಚ್ಚುವ ಮೂಲಕ ತಂಡವನ್ನು ಇನ್ನೂರರ ಗಡಿ ದಾಟಿಸಿದರು. 
ಮತ್ತೆ ಸಿಡಿದ ನರೈನ್-ಕಾರ್ತಿಕ್:
ಗೆಲ್ಲಲೇ ಬೇಕಾದ ಒತ್ತಡದಲ್ಲಿ ಕಣಕ್ಕಿಳಿದಿರುವ ಕೆಕೆಆರ್’ಗೆ ನರೈನ್ ಸ್ಫೋಟಕ ಆರಂಭ ಒದಗಿಸಿಕೊಟ್ಟರು. ಕೇವಲ 36 ಎಸೆತಗಳನ್ನು ಎದುರಿಸಿದ ನರೈನ್ 9 ಬೌಂಡರಿ 4 ಸಿಕ್ಸರ್’ಗಳ ನೆರವಿನಿಂದ 75 ರನ್ ಚಚ್ಚಿದರು. ಇನ್ನು ಮಧ್ಯಮ ಕ್ರಮಾಂಕದಲ್ಲಿ ಆಡಲಿಳಿದ ದಿನೇಶ್ ಕಾರ್ತಿಕ್ 23 ಎಸೆತಗಳಲ್ಲಿ 50 ರನ್ ಬಾರಿಸಿ ತಂಡಕ್ಕೆ ಆಸರೆಯಾದರು.
ಪಂಜಾಬ್ ಪರ ಆ್ಯಂಡ್ರೋ ಟೈ 4 ವಿಕೆಟ್ ಪಡೆದರೆ, ಮೋಹಿತ್ ಶರ್ಮಾ, ಬರೀಂದರ್ ಸರನ್ ತಲಾ ಒಂದೊಂದು ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್:
KKR: 245/6
ಸುನಿಲ್ ನರೈನ್: 75
ಆ್ಯಂಡ್ರೋ ಟೈ:   41/4
(* ವಿವರ ಅಪೂರ್ಣ]

Follow Us:
Download App:
  • android
  • ios