ಸೆಮಿಫೈನಲ್‌'ನಲ್ಲಿ ನಡಾಲ್, ಅರ್ಜಿಂಟೀನಾದ ಎಚ್.ಝೆಬಾಲೊಸ್ ವಿರುದ್ಧ 6-3, 6-4 ನೇರ ಸೆಟ್‌'ಗಳಲ್ಲಿ ಸುಲಭ ಗೆಲುವು ಸಾಧಿಸಿದರು.

ಬಾರ್ಸಿಲೋನಾ(ಏ.30): ಇಲ್ಲಿ ನಡೆಯುತ್ತಿರುವ ಬಾರ್ಸಿಲೋನಾ ಓಪನ್ ಟೆನಿಸ್ ಪಂದ್ಯಾವಳಿಯ ಫೈನಲ್‌'ಗೆ ಸ್ಪೇನ್‌'ನ ರಾಫೆಲ್ ನಡಾಲ್ ಪ್ರವೇಶಿಸಿದ್ದಾರೆ.

ಸೆಮಿಫೈನಲ್‌'ನಲ್ಲಿ ನಡಾಲ್, ಅರ್ಜಿಂಟೀನಾದ ಎಚ್.ಝೆಬಾಲೊಸ್ ವಿರುದ್ಧ 6-3, 6-4 ನೇರ ಸೆಟ್‌'ಗಳಲ್ಲಿ ಸುಲಭ ಗೆಲುವು ಸಾಧಿಸಿದರು.

ಇದೇ ವೇಳೆ ಮತ್ತೊಂದು ಸೆಮಿಫೈನಲ್‌'ನಲ್ಲಿ ವಿಶ್ವದ ನಂಬರ್ 1 ಆಟಗಾರ ಬ್ರಿಟನ್‌'ನ ಆ್ಯಂಡಿ ಮರ್ರೆ ಆಸ್ಟ್ರಿಯಾದ ಡೊಮಿನಿಕ್ ಥಿಯೆಮ್ ವಿರುದ್ಧ 2-6, 6-3, 4-6 ಸೆಟ್‌'ಗಳಿಂದ ಪರಾಭವಗೊಂಡು ಆಘಾತ ಅನುಭವಿಸಿದರು.