ಅಗ್ರ ಸ್ಥಾನದಲ್ಲಿ ಬ್ರಿಟನ್‌'ನ ಆ್ಯಂಡಿ ಮರ್ರೆ ಮುಂದುವರಿದರೆ, ಫೈನಲ್‌'ನಲ್ಲಿ ನಡಾಲ್‌ ವಿರುದ್ಧ ಸೋತ ಸ್ಟಾನಿಸ್ಲಾಸ್‌ ವಾವ್ರಿಂ­ಕಾ ­3ನೇ ಸ್ಥಾನ ಕಾಯ್ದುಕೊಂಡಿದ್ದಾರೆ.
ಪ್ಯಾರಿಸ್(ಜೂ.13): ಫ್ರೆಂಚ್ ಓಪನ್ ಪುರುಷರ ಸಿಂಗಲ್ಸ್'ನಲ್ಲಿ ಪ್ರಶಸ್ತಿಗೆ ಮುತ್ತಿಟ್ಟ ಸ್ಪೇನ್'ನ ರಾಫೆಲ್ ನಡಾಲ್ ಎಟಿಪಿ ಶ್ರೇಯಾಂಕದಲ್ಲಿ ಎರಡು ಸ್ಥಾನ ಜಿಗಿತ ಕಂಡು 2ನೇ ಸ್ಥಾನಕ್ಕೇರಿದ್ದಾರೆ. 2014ರ ಅಕ್ಟೋಬರ್ ಬಳಿಕ ನಡಾಲ್ ಎರಡನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ.
ಇನ್ನು ಫ್ರೆಂಚ್ ಗ್ರ್ಯಾಂಡ್ ಸ್ಲಾಂನ ಮಹಿಳೆಯರ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರ ಹೊಮ್ಮಿದ ಲಾತ್ವಿಯಾದ ಎಲೆನಾ ಆಸ್ಟಪೆನ್ಕೊ ಡಬ್ಲ್ಯೂಟಿಎ ಶ್ರೇಯಾಂಕ ಪಟ್ಟಿಯಲ್ಲಿ 47ನೇ ಸ್ಥಾನದಿಂದ 12ನೇ ಸ್ಥಾನಕ್ಕೆ ಜಿಗಿದ್ದಿದ್ದಾರೆ.
ಅಗ್ರ ಸ್ಥಾನದಲ್ಲಿ ಬ್ರಿಟನ್'ನ ಆ್ಯಂಡಿ ಮರ್ರೆ ಮುಂದುವರಿದರೆ, ಫೈನಲ್'ನಲ್ಲಿ ನಡಾಲ್ ವಿರುದ್ಧ ಸೋತ ಸ್ಟಾನಿಸ್ಲಾಸ್ ವಾವ್ರಿಂಕಾ 3ನೇ ಸ್ಥಾನ ಕಾಯ್ದುಕೊಂಡಿದ್ದಾರೆ. ರೋಜರ್ ಫೆಡರರ್ 5ನೇ ಸ್ಥಾನ ಉಳಿಸಿಕೊಂಡಿದ್ದಾರೆ.
ಮಹಿಳೆಯರ ವಿಭಾಗದಲ್ಲಿ ಜರ್ಮನಿಯ ಏಂಜಲಿಕ್ ಕೆರ್ಬರ್ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ಸಿಮೊನಾ ಹಾಲೆಪ್ 2ನೇ ಸ್ಥಾನಕ್ಕೇರಿದರೆ, ಸೆರೆನಾ ವಿಲಿಯಮ್ಸ್ 4ನೇ ಸ್ಥಾನಕ್ಕೆ ಕುಸಿದಿದ್ದಾರೆ.
