Asianet Suvarna News Asianet Suvarna News

ಅಶ್ವಿನ್, ಯಾಸಿರ್ ನನ್ನ ದಾಖಲೆ ಮುರಿಯಬಹುದು

‘‘ದಾಖಲೆಗಳು ಇರುವುದೇ ಮುರಿಯುವುದಕ್ಕೆ. ಕೇವಲ 39 ಟೆಸ್ಟ್ ಪಂದ್ಯಗಳಲ್ಲಿ 220 ಮತ್ತು 17 ಟೆಸ್ಟ್‌ಗಳಲ್ಲಿ 100 ವಿಕೆಟ್ ಸಾಧನೆ ಮೆರೆದಿರುವ ಆರ್ ಅಶ್ವಿನ್ ಹಾಗೂ ಲೆಗ್‌ಸ್ಪಿನ್ನರ್ ಯಾಸಿರ್ ಶಾ ಇದೇ ಹಾದಿಯಲ್ಲಿ ಮುಂದುವರೆದರೆ ಖಂಡಿತಾ ಅವರು ನನ್ನ ದಾಖಲೆಯನ್ನು ಮುರಿಯುವುದರಲ್ಲಿ ಸಂಶಯವಿಲ್ಲ’’ ಎಂದು ಮುರಳೀಧರನ್ ಹೇಳಿದ್ದಾರೆ.

Muttiah Muralitharan predicts both R Ashwin and Yasir Shah on current form to beat his record

ಕೊಲಂಬೊ(ಅ.19): ಪ್ರಸ್ತುತ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಆರ್. ಅಶ್ವಿನ್ ಹಾಗೂ ಪಾಕಿಸ್ತಾನದ ಯಾಸಿರ್ ಶಾ ತೋರುತ್ತಿರುವ ಪ್ರದರ್ಶನವನ್ನು ನೋಡಿದರೆ, ಅವರು ಮುಂದಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಾನು ನಿರ್ಮಿಸಿರುವ ಗರಿಷ್ಠ ವಿಕೆಟ್ (800) ದಾಖಲೆಯನ್ನು ಮುರಿಯುವುದು ಸ್ಪಷ್ಟವಾಗುತ್ತದೆ ಎಂದು ಶ್ರೀಲಂಕಾದ ಮಾಜಿ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ಅಭಿಪ್ರಾಯಿಸಿದ್ದಾರೆ.

‘‘ದಾಖಲೆಗಳು ಇರುವುದೇ ಮುರಿಯುವುದಕ್ಕೆ. ಕೇವಲ 39 ಟೆಸ್ಟ್ ಪಂದ್ಯಗಳಲ್ಲಿ 220 ಮತ್ತು 17 ಟೆಸ್ಟ್‌ಗಳಲ್ಲಿ 100 ವಿಕೆಟ್ ಸಾಧನೆ ಮೆರೆದಿರುವ ಆರ್ ಅಶ್ವಿನ್ ಹಾಗೂ ಲೆಗ್‌ಸ್ಪಿನ್ನರ್ ಯಾಸಿರ್ ಶಾ ಇದೇ ಹಾದಿಯಲ್ಲಿ ಮುಂದುವರೆದರೆ ಖಂಡಿತಾ ಅವರು ನನ್ನ ದಾಖಲೆಯನ್ನು ಮುರಿಯುವುದರಲ್ಲಿ ಸಂಶಯವಿಲ್ಲ’’ ಎಂದು ಮುರಳೀಧರನ್ ಹೇಳಿದ್ದಾರೆ.

 ಶ್ರೀಲಂಕಾದ ಆಟಗಾರ 42 ಪಂದ್ಯಗಳಲ್ಲಿ 200 ವಿಕೆಟ್'ಗಳ ಮೈಲುಗಲ್ಲು ಮುಟ್ಟಿದ್ದರೆ, ಭಾರತದ ಕೇರಂ ಬಾಲ್ ಸ್ಪೆಷಲಿಷ್ಟ್ ಅಶ್ವಿನ್ ಕೇವಲ 37 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದಾರೆ. 18 ವರ್ಷಗಳ ಟೆಸ್ಟ್ ವೃತ್ತಿಜೀವನದಲ್ಲಿ ಮುತ್ತಯ್ಯಾ 133 ಪಂದ್ಯಗಳನ್ನಾಡಿ 800 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಟೆಸ್ಟ್ ಕ್ರಿಕೆಟ್'ನಲ್ಲಿ ಗರಿಷ್ಟ ವಿಕೆಟ್ ಪಡೆದ ಬೌಲರ್ ಎಂಬ ಕೀರ್ತಿಗೂ ಶ್ರೀಲಂಕಾದ ಆಟಗಾರ ಪಾತ್ರರಾಗಿದ್ದಾರೆ.

Follow Us:
Download App:
  • android
  • ios