ಕೆಕೆಆರ್ ಎದುರಿಸಲು ಸಜ್ಜಾದ ಮುಂಬೈ ಇಂಡಿಯನ್ಸ್

sports | Sunday, May 6th, 2018
Naveen Kodase
Highlights

ಇದುವರೆಗೆ ಆಡಿರುವ 9 ಪಂದ್ಯಗಳಲ್ಲಿ 3 ಜಯ, 6ರಲ್ಲಿ ಸೋಲುಂಡು ಪಟ್ಟಿಯಲ್ಲಿ 5ನೇ ಸ್ಥಾನ ಹೊಂದಿರುವ ಮುಂಬೈ ಪ್ಲೇ ಆಫ್ ಹಂತಕ್ಕೇರಬೇಕಿದ್ದರೆ, ಮುಂದಿನ 5 ಪಂದ್ಯಗಳಲ್ಲಿ ಗೆಲುವು ಪಡೆಯಲೇಬೇಕಿದೆ. 

ಮುಂಬೈ[ಮೇ.06]: ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ 11ನೇ ಆವೃತ್ತಿಯ ಐಪಿಎಲ್‌’ನಲ್ಲಿ ಪ್ರಶಸ್ತಿ ಗೆಲ್ಲುವ ಆಸೆಯನ್ನು ಜೀವಂತವಾಗಿ ಇರಿಸಿಕೊಳ್ಳಬೇಕಾದರೆ, ಇಂದು ಕೋಲ್ಕತಾ ನೈಟ್ ರೈಡರ್ಸ್‌ ವಿರುದ್ಧದ ಪಂದ್ಯದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆಯಲ್ಲಿದೆ. 
ಇದುವರೆಗೆ ಆಡಿರುವ 9 ಪಂದ್ಯಗಳಲ್ಲಿ 3 ಜಯ, 6ರಲ್ಲಿ ಸೋಲುಂಡು ಪಟ್ಟಿಯಲ್ಲಿ 5ನೇ ಸ್ಥಾನ ಹೊಂದಿರುವ ಮುಂಬೈ ಪ್ಲೇ ಆಫ್ ಹಂತಕ್ಕೇರಬೇಕಿದ್ದರೆ, ಮುಂದಿನ 5 ಪಂದ್ಯಗಳಲ್ಲಿ ಗೆಲುವು ಪಡೆಯಲೇಬೇಕಿದೆ. ಮತ್ತೊಂದೆಡೆ 9 ರಲ್ಲಿ 5 ಗೆಲುವು ಸಾಧಿಸಿ 10 ಅಂಕಗಳೊಂದಿಗೆ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿರುವ ಕೋಲ್ಕತಾ ನೈಟ್ ರೈಡರ್ಸ್‌, ಪ್ಲೇ ಆಫ್‌’ನತ್ತ ಹೆಜ್ಜೆ ಹಾಕಿದೆ. 

ಪಿಚ್ ರಿಪೋರ್ಟ್: ಸ್ಪಿನ್ನರ್‌ಗಳಿಗೆ ಹೆಚ್ಚು ನೆರವು ವಾಂಖೇಡೆ ಕ್ರೀಡಾಂಗಣದಲ್ಲಿ ಈ ಆವೃತ್ತಿಯಲ್ಲಿ 4 ಪಂದ್ಯಗಳು
ನಡೆದಿವೆ. ಈ ಎಲ್ಲ ಪಂದ್ಯಗಳಲ್ಲೂ ಬ್ಯಾಟ್ಸ್‌ಮನ್‌’ಗಳಿಗಿಂತ ಬೌಲರ್’ಗಳು ಪಾರಮ್ಯ ಮೆರೆದಿದ್ದಾರೆ. 4 ಪಂದ್ಯಗಳ ಪೈಕಿ 2ರಲ್ಲಿ ಮೊದಲು ಫೀಲ್ಡಿಂಗ್ ಮಾಡಿದ ತಂಡ ಜಯ ಸಾಧಿಸಿದರೆ, ಇನ್ನೆರಡರಲ್ಲಿ ಫಲಿತಾಂಶ ಉಲ್ಟಾ ಆಗಿದೆ. 

ಸಂಭಾವ್ಯ ತಂಡ:
ಮುಂಬೈ ಇಂಡಿಯನ್ಸ್: ಸೂರ್ಯಕುಮಾರ್, ಲೆವಿಸ್, ಇಶಾನ್, ಹಾರ್ದಿಕ್ ಪಾಂಡ್ಯ, ರೋಹಿತ್ (ನಾಯಕ), ಕೃನಾಲ್ ಪಾಂಡ್ಯ, ಡುಮಿನಿ, ಬೆನ್ ಕಟ್ಟಿಂಗ್, ಮೆಕ್ಲೆನಘನ್, ಮರ್ಕಂಡೆ, ಬುಮ್ರಾ. 
ಕೋಲ್ಕತಾ ನೈಟ್ ರೈಡರ್ಸ್‌: ಕ್ರಿಸ್ ಲಿನ್, ಸುನಿಲ್ ನರೈನ್, ರಾಬಿನ್ ಉತ್ತಪ್ಪ, ಶುಭ್‌’ಮನ್, ರಿಂಕು, ದಿನೇಶ್ ಕಾರ್ತಿಕ್ (ನಾಯಕ), ರಸೆಲ್, ಶಿವಂ ಮಾವಿ, ಪಿಯೂಷ್ ಚಾವ್ಲಾ, ಜಾನ್ಸನ್, ಕುಲ್ದೀಪ್
ಸ್ಥಳ: ಮುಂಬೈ, ಪಂದ್ಯ ಆರಂಭ: ಸಂಜೆ 4 ಗಂಟೆಗೆ, ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ 1 

Comments 0
Add Comment

  Related Posts

  India Today Karnataka PrePoll 2018 Part 7

  video | Friday, April 13th, 2018

  India Today Karnataka Prepoll 2018

  video | Friday, April 13th, 2018

  India Today Karnataka Prepoll 2018 Part 5

  video | Friday, April 13th, 2018

  India Today Karnataka Prepoll 2018 Part 2

  video | Friday, April 13th, 2018

  India Today Karnataka PrePoll 2018 Part 7

  video | Friday, April 13th, 2018
  Naveen Kodase