ಮೊಹಾಲಿ(ಏ.08): ನಾಯಕ ಗೌತಮ್ ಗಂಭೀರ್ ಆಕರ್ಷಕ ಬ್ಯಾಟಿಂಗ್ ನೆರವಿನಿಂದ ಡೆಲ್ಲಿ ಡೇರ್'ಡೆವಿಲ್ಸ್ KXIP ವಿರುದ್ಧ 166 ರನ್'ಗಳ ಸವಾಲಿನ ಮೊತ್ತ ಕಲೆಹಾಕಿದೆ.

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಡೆಲ್ಲಿ ಆರಂಭದಲ್ಲೇ ಮುಗ್ಗರಿಸಿತು. ಆರಂಭಿಕ ಕಾಲಿನ್ ಮನ್ರೋ ಕೇವಲ 4 ರನ್'ಗಳಿಸಿ ಮುಜೀಬ್'ಗೆ ವಿಕೆಟ್ ಒಪ್ಪಿಸಿದರು. ಆ ಬಳಿಕ ಗಂಭೀರ್ ಹಾಗೂ ಶ್ರೇಯಸ್ ಅಯ್ಯರ್ ತಂಡಕ್ಕೆ ಚೇತರಿಕೆ ನೀಡಿದರು. ಮೊದಲ 10 ಓವರ್ ಮುಕ್ತಾಯದ ವೇಳೆ ಎರಡು ವಿಕೆಟ್ ಕಳೆದುಕೊಂಡು ಡೆಲ್ಲಿ 77 ರನ್ ಗಳಿಸಿತ್ತು. ಕೋಲ್ಕತ ನೈಟ್'ರೈಡರ್ಸ್ ತೊರೆದು ಡೆಲ್ಲಿ ನಾಯಕತ್ವ ವಹಿಸಿಕೊಂಡಿರುವ ಗಂಭೀರ್ ಮತ್ತೆ ಮಿಂಚಿನ ಆಟವಾಡಿದರು. ಕೇವಲ 42 ಎಸೆತಗಳನ್ನು ಎದುರಿಸಿ 5 ಬೌಂಡರಿ ಹಾಗೂ ಒಂದು ಆಕರ್ಷಕ ಸಿಕ್ಸರ್ ಸೇರಿದಂತೆ 55 ರನ್ ಬಾರಿಸಿ ರನೌಟ್'ಗೆ ಬಲಿಯಾದರು.

ಗಂಭೀರ್ ಔಟ್ ಆಗಿ ಮೂರು ಎಸೆತಗಳಲ್ಲೇ ರಾಹುಲ್ ತೆವಾಟಿಯಾ ಕೂಡಾ ಪೆವಿಲಿಯನ್ ಸೇರಿದರು. ಇದಾದ ಬಳಿಕ ಕ್ರಿಸ್ ಮೋರಿಸ್(27) ಸ್ಫೋಟಕ ಬ್ಯಾಟಿಂಗ್ ನಡೆಸುವ ಮೂಲಕ ತಂಡದ ಮೊತ್ತವನ್ನು 150ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು.

ಸಂಕ್ಷಿಪ್ತ ಸ್ಕೋರ್:  

ಗೌತಮ್ ಗಂಭೀರ್: 55

ರೆಹಮಾನ್: 28/2

(*ವಿವರ ಅಪೂರ್ಣ)