ಹೊಸ ಹೇರ್'ಸ್ಟೈಲ್'ನಲ್ಲಿ ಧೋನಿ ಶೈನಿಂಗ್

MS Dhoni Sports a New Stylish Haircut For IPL
Highlights

ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂ.ಎಸ್.ಧೋನಿ, ವಿನೂತನ ಕೇಶ ವಿನ್ಯಾಸದೊಂದಿಗೆ ಕಾಣಿಸಿಕೊಂಡಿದ್ದಾರೆ. ವಿಭಿನ್ನ ಸ್ಟೈಲ್‌'ಗಳಿಗೆ ಭಾರತದ ಮಾಜಿ ನಾಯಕ ಹೆಸರು ವಾಸಿಯಾಗಿದ್ದಾರೆ.

ಹೈದರಾಬಾದ್(ಏ.23): ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂ.ಎಸ್.ಧೋನಿ, ವಿನೂತನ ಕೇಶ ವಿನ್ಯಾಸದೊಂದಿಗೆ ಕಾಣಿಸಿಕೊಂಡಿದ್ದಾರೆ. ವಿಭಿನ್ನ ಸ್ಟೈಲ್‌'ಗಳಿಗೆ ಭಾರತದ ಮಾಜಿ ನಾಯಕ ಹೆಸರು ವಾಸಿಯಾಗಿದ್ದಾರೆ.

ತಾರಾ ಕೇಶ ವಿನ್ಯಾಸಗಾರ್ತಿ ಹಾಗೂ ಧೋನಿಯ ಆಪ್ತ ಸ್ನೇಹಿತೆ ಸಪ್ನಾ ಭವ್ನಾನಿ, ಹೊಸ ಹೇರ್ಸ್ಟೈಲ್‌' ಹೆಸರುವೈಕಿಂಗ್ಎಂದು ಟ್ವೀಟರ್ನಲ್ಲಿ ಬಹಿರಂಗಪಡಿಸಿದ್ದಾರೆ. ಸಿಎಸ್ಕೆ ನಾಯಕನ ನೂತನ ವಿನ್ಯಾಸ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.

2 ವರ್ಷಗಳ ಬಳಿಕ ಐಪಿಎಲ್'ಗೆ ಕಮ್'ಬ್ಯಾಕ್ ಮಾಡಿರುವ ಚೆನ್ನೈ ಸೂಪರ್'ಕಿಂಗ್ಸ್ ಅದ್ಭುತ ಪ್ರದರ್ಶನ ತೋರುತ್ತಿದ್ದು, 5 ಪಂದ್ಯಗಳಲ್ಲಿ 4 ನಾಲ್ಕು ಗೆಲುವಿನೊಂದಿಗೆ ಅಗ್ರಸ್ಥಾನದಲ್ಲಿದೆ.

loader