ಪ್ರೇಕ್ಷಕರ ದುರ್ವರ್ತನೆ ನಡೆಯುತ್ತಿರುವ ವೇಳೆಯೇ ಭಾರತ ತಂಡದ ಮಾಜಿ ನಾಯಕ ಎಂಎಸ್ ಧೋನಿ ಮಾತ್ರ ಏನೂ ಆಗದವರಂತೆ ಕೆಲ ಕಾಲ ಮೈದಾನದೊಳಗೇ 'ನಿದ್ರೆ'ಗೆ ಜಾರಿದರು. ಈ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ, ಅದರಲ್ಲೂ ಟ್ವಿಟ್ಟರ್'ನಲ್ಲಿ ಭಾರೀ ವೈರಲ್ ಆಯಿತು. ಕ್ರೀಡಾಸ್ಫೂರ್ತಿಯಿಲ್ಲದ ಪ್ರೇಕ್ಷಕರಿಗೆ ಧೋನಿಯದ್ದು ಡೋಂಟ್ ಕೇರ್ ಮೆಸೇಜ್ ಅದಾಗಿದೆ ಎಂಬ ಅಭಿಪ್ರಾಯಗಳೂ ವ್ಯಕ್ತವಾದವು.

ಪಲ್ಲೆಕೆಲೆ, ಶ್ರೀಲಂಕಾ: ನಿನ್ನೆ ಶ್ರೀಲಂಕಾ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಯಲ್ಲಿ ಟೀಮ್ ಇಂಡಿಯಾ ಹ್ಯಾಟ್ರಿಕ್ ಗೆಲುವು ಪಡೆಯಿತು. ರೋಹಿತ್ ಶರ್ಮಾ ಮತ್ತು ಎಂಎಸ್ ಧೋನಿ ಇಬ್ಬರೂ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿ ಭಾರತಕ್ಕೆ ಗೆಲುವು ತಂದುಕೊಟ್ಟರು. ಅತ್ತ, ಸ್ಟೇಡಿಯಂನಲ್ಲಿದ್ದ ಲಂಕಾದ ಪ್ರೇಕ್ಷಕರಿಗೆ ತಮ್ಮ ತಂಡದ ಸಾಲು ಸಾಲು ಸೋಲುಗಳನ್ನು ಅರಗಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಸೋಲು ಖಚಿತವಾಗುತ್ತಿದ್ದಂತೆಯೇ ಪ್ರೇಕ್ಷಕರು ಹತಾಶೆಯಿಂದ ಬಾಟಲ್'ಗಳನ್ನು ಮೈದಾನದೊಳಗೆ ಎಸೆದು ಆಕ್ರೋಶ ವ್ಯಕ್ತಪಡಿಸಿದರು. ಆಟವನ್ನು ಆಟವಾಗಿ ಸ್ವೀಕರಿಸುವ ಮನೋಭಾವ ಮತ್ತು ಕ್ರೀಡಾಸ್ಫೂರ್ತಿಯನ್ನು ಪ್ರೇಕ್ಷಕರು ಕಳೆದುಕೊಂಡರು. ಪಂದ್ಯ ಸುಮಾರು ಅರ್ಧಗಂಟೆ ಕಾಲ ಸ್ಥಗಿತಗೊಂಡಿತು.

ಪ್ರೇಕ್ಷಕರ ದುರ್ವರ್ತನೆ ನಡೆಯುತ್ತಿರುವ ವೇಳೆಯೇ ಭಾರತ ತಂಡದ ಮಾಜಿ ನಾಯಕ ಎಂಎಸ್ ಧೋನಿ ಮಾತ್ರ ಏನೂ ಆಗದವರಂತೆ ಕೆಲ ಕಾಲ ಮೈದಾನದೊಳಗೇ 'ನಿದ್ರೆ'ಗೆ ಜಾರಿದರು. ಈ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ, ಅದರಲ್ಲೂ ಟ್ವಿಟ್ಟರ್'ನಲ್ಲಿ ಭಾರೀ ವೈರಲ್ ಆಯಿತು. ಕ್ರೀಡಾಸ್ಫೂರ್ತಿಯಿಲ್ಲದ ಪ್ರೇಕ್ಷಕರಿಗೆ ಧೋನಿಯದ್ದು ಡೋಂಟ್ ಕೇರ್ ಮೆಸೇಜ್ ಅದಾಗಿದೆ ಎಂಬ ಅಭಿಪ್ರಾಯಗಳೂ ವ್ಯಕ್ತವಾದವು.

Scroll to load tweet…
Scroll to load tweet…
Scroll to load tweet…