‘ಆಗ ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆ ಮಾಡುವ ಪ್ರಯೋಗ ನಡೆಸಲಾಗುತ್ತಿತ್ತು. ಆಗ ಉತ್ತಮ ಆರಂಭ ದೊರೆತರೆ ಗಂಗೂಲಿಯನ್ನು 3ನೇ ಸ್ಥಾನದಲ್ಲಿ ಆಡಿಸಲು ನಿರ್ಧರಿಸಲಾಗಿತ್ತು.
ನವದೆಹಲಿ(ಅ.08): ಮಹೇಂದ್ರ ಸಿಂಗ್ ಧೋನಿ ಶ್ರೇಷ್ಠ ಆಟಗಾರ ಆಗಬೇಕೆಂದು ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ತಮ್ಮ ವೃತ್ತಿಜೀವನವನ್ನೇ ತ್ಯಾಗ ಮಾಡಿದರು ಎಂದು ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ತಿಳಿಸಿದ್ದಾರೆ. ಗಂಗೂಲಿಯ ನಿರ್ಧಾರದಿಂದಲೇ ವಿಕೆಟ್ ಕೀಪರ್ ಆಗಿದ್ದ ಧೋನಿ ಇದೀಗ ಶ್ರೇಷ್ಠ ಆಟಗಾರರಾಗಿದ್ದಾರೆ ಎಂದಿದ್ದಾರೆ. ‘ಆಗ ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆ ಮಾಡುವ ಪ್ರಯೋಗ ನಡೆಸಲಾಗುತ್ತಿತ್ತು. ಆಗ ಉತ್ತಮ ಆರಂಭ ದೊರೆತರೆ ಗಂಗೂಲಿಯನ್ನು 3ನೇ ಸ್ಥಾನದಲ್ಲಿ ಆಡಿಸಲು ನಿರ್ಧರಿಸಲಾಗಿತ್ತು. ಇಲ್ಲವಾದಲ್ಲಿ ಇರ್ಫಾನ್ ಪಠಾಣ್‌ರನ್ನು ಆಡಿಸಲು ತೀರ್ಮಾನಿಸಲಾಗಿತ್ತು. ಆದರೆ ಗಂಗೂಲಿ ತಮ್ಮ ಸ್ಥಾನವನ್ನು ಧೋನಿಗೆ ಬಿಟ್ಟುಕೊಟ್ಟರು. ಕೆಲವು ಅಪರೂಪದ ನಾಯಕರ ಪೈಕಿ ಗಂಗೂಲಿ ಸಹ ಒಬ್ಬರು’ ಎಂದು ಸೆಹ್ವಾಗ್ ಹೇಳಿದ್ದಾರೆ.
