ಧೋನಿಗೆ ಕ್ರಿಕೆಟ್ ದಿಗ್ಗಜರಾದ ಕಪಿಲ್ ದೇವ್ ಹಾಗೂ ಸೌರವ್ ಗಂಗೂಲಿ ಸಾಥ್ ನೀಡಿದ್ದರು. ಟೆಸ್ಟ್ ತಂಡದಲ್ಲಿ ಧೋನಿ ಇಲ್ಲದಿದ್ದರೂ ಅವರ ಸಲಹೆಗಳು ನಮಗೆ ಸದಾ ಅಗತ್ಯ ಎಂದು ಕೊಹ್ಲಿ ಇತ್ತೀಚೆಗೆ ಹೇಳಿದ್ದರು.

ಕೋಲ್ಕತಾ(ನ.10): ಭಾರತ-ಶ್ರೀಲಂಕಾ ನಡುವಿನ ಮೊದಲ ಟೆಸ್ಟ್‌'ಗೆ ಇದೇ ನ.16ರಿಂದ ಆತಿಥ್ಯ ವಹಿಸಲಿರುವ ಇಲ್ಲಿನ ಈಡನ್ ಗಾರ್ಡನ್ ಕ್ರೀಡಾಂಗಣದ ಪಿಚ್ ಅನ್ನು ಭಾರತ ತಂಡದ ಮಾಜಿ ನಾಯಕ ಎಂ.ಎಸ್.ಧೋನಿ ಪರೀಕ್ಷಿಸಿದರು.

ಜಾಹೀರಾತು ಚಿತ್ರೀಕರಣಕ್ಕಾಗಿ ಇಲ್ಲಿಗೆ ಆಗಮಿಸಿದ್ದ ಧೋನಿ, ಪಿಚ್ ಕ್ಯುರೇಟರ್ ಸುಜನ್ ಮುಖರ್ಜಿ ಜತೆ ಕೆಲ ಕಾಲ ಚರ್ಚಿಸುತ್ತಿದಿದ್ದು ಎಲ್ಲರ ಗಮನ ಸೆಳೆಯಿತು. ‘ಪಿಚ್ ತಯಾರಿ ಬಗ್ಗೆ ಧೋನಿ ಮೆಚ್ಚುಗೆ ವ್ಯಕ್ತಪಡಿಸಿದರು’ ಎಂದು ಸುಜನ್ ಮುಖರ್ಜಿ ತಿಳಿಸಿದ್ದಾರೆ.

ಧೋನಿಗೆ ಕ್ರಿಕೆಟ್ ದಿಗ್ಗಜರಾದ ಕಪಿಲ್ ದೇವ್ ಹಾಗೂ ಸೌರವ್ ಗಂಗೂಲಿ ಸಾಥ್ ನೀಡಿದ್ದರು. ಟೆಸ್ಟ್ ತಂಡದಲ್ಲಿ ಧೋನಿ ಇಲ್ಲದಿದ್ದರೂ ಅವರ ಸಲಹೆಗಳು ನಮಗೆ ಸದಾ ಅಗತ್ಯ ಎಂದು ಕೊಹ್ಲಿ ಇತ್ತೀಚೆಗೆ ಹೇಳಿದ್ದರು.