ಭಾರತದ ಕೋಚ್'ಗಳು ಅಲ್ಲಿ ತೆರಳಿ ತರಬೇತಿ ನೀಡಲಿದ್ದಾರೆ. ಮುಂಬೈ ತಂಡದ ಮಾಜಿ ಬೌಲರ್ ವಿಶಾಲ್ ಮಹದಿಕ್, ಕೋಚ್‌ಗಳ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ.
ದುಬೈ(ನ.12): ಭಾರತ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿ ತಮ್ಮ ಹೆಸರಿನಲ್ಲಿ ಸಿದ್ಧಗೊಂಡಿರುವ ಮೊದಲ ಗ್ಲೋಬಲ್ ಕ್ರಿಕೆಟ್ ಅಕಾಡೆಮಿಗೆ ಶನಿವಾರ ಚಾಲನೆ ನೀಡಿದರು.
ದುಬೈ ಮೂಲದ ಪೆಸಿಫಿಕ್ ಸ್ಪೋರ್ಟ್ಸ್ ಕ್ಲಬ್ ಮತ್ತು ಅರ್ಕ ಸ್ಪೋರ್ಟ್ ಕ್ಲಬ್ ಜತೆಗೂಡಿ ಎಂಎಸ್ ಧೋನಿ ಕ್ರಿಕೆಟ್ ಅಕಾಡೆಮಿ (ಎಂಎಸ್ ಡಿಸಿಎ)ಯನ್ನು ಸ್ಥಾಪಿಸಿದ್ದು, ಭಾರತದ ಕೋಚ್'ಗಳು ಅಲ್ಲಿ ತೆರಳಿ ತರಬೇತಿ ನೀಡಲಿದ್ದಾರೆ. ಮುಂಬೈ ತಂಡದ ಮಾಜಿ ಬೌಲರ್ ವಿಶಾಲ್ ಮಹದಿಕ್, ಕೋಚ್ಗಳ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ. 4 ಟರ್ಫ್, 3 ಸಿಮೆಂಟ್ ಮತ್ತು 3 ಮ್ಯಾಟ್ ಪಿಚ್ಗಳು, ಸ್ಪಿನ್ ಮತ್ತು ಸ್ವಿಂಗ್ ಬೌಲಿಂಗ್ ಯಂತ್ರಗಳು, ಹಗಲು ರಾತ್ರಿ ಪಂದ್ಯಗಳನ್ನಾಡಲು ಅನುಕೂಲವಾಗಲು ಲೈಟ್ಸ್ ವ್ಯವಸ್ಥೆ ಸೇರಿದಂತೆ ಅನೇಕ ಸೌಲಭ್ಯಗಳನ್ನು ಈ ಅಕಾಡೆಮಿ ಹೊಂದಿದೆ. ಇದರ ಜತೆಗೆ ಅಕಾಡೆಮಿ ನಿರಂತರವಾಗಿ ಪಂದ್ಯಗಳ ಹಾಗೂ ಪಂದ್ಯಾವಳಿಗಳ ಆಯೋಜನೆ ಮೂಲಕ ಆಟಗಾರರಿಗೆ ಸೂಕ್ತ ತರಬೇತಿ ನೀಡುವುದು. ಅವರಲ್ಲಿನ ಪ್ರತಿಭೆಯನ್ನು ಬೆಳಕಿಗೆ ತರಲು ಶ್ರಮಿಸಲಾಗುವುದು ಎಂದು ಅಕಾಡೆಮಿ ತಿಳಿಸಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಧೋನಿ, ‘ಈ ಯೋಜನೆಯ ಭಾಗವಾಗಿರುವುದು ಅತ್ಯಂತ ಸಂತಸವನ್ನುಂಟು ಮಾಡಿದೆ. ಕ್ರಿಕೆಟ್ಗೆ ಎಷ್ಟು ಸಾಧ್ಯವೋ ಅಷ್ಟು ಕೊಡುಗೆ ನೀಡುವುದು ನನ್ನ ಕನಸಾಗಿದೆ. ಈ ನಿಟ್ಟಿನಲ್ಲಿ ಇದು ಮೊದಲ ಹೆಜ್ಜೆ’ ಎಂದರು.
