ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹಾಗೂ ಟೀಮ್ಇಂಡಿಯಾ ಕ್ರಿಕೆಟ್ ಅಭಿಮಾನಿ ಸುಧೀರ್ ಕುಮಾರ್ ಗೌತಮ್‌ಗೆ ಎಮ್ ಎಸ್ ಧೋನಿ ಸ್ಪೆಷಲ್ ಗಿಫ್ಟ್ ನೀಡಿದ್ದಾರೆ. ಧೋನಿ ಮನೆಯಲ್ಲಿ ಸುಧೀರ್ ಕುಮಾರ್ ಗೌತಮ್‌ಗಾಗಿ ಭರ್ಜರಿ ಔತಣ ಕೂಟ ಆಯೋಜಿಸಿ ಅಭಿಮಾನಿಯನ್ನ ಗೌರವಿಸಿದರು.

ರಾಂಚಿ(ಜೂನ್.2): ಟೀಮ್ಇಂಡಿಯಾದ ಕಟ್ಟಾ ಅಭಿಮಾನಿ ಸುಧೀರ್ ಕುಮಾರ್ ಗೌತಮ್ ಪ್ರತಿ ಪಂದ್ಯದಲ್ಲೂ ಭಾರತೀಯ ಕ್ರಿಕೆಟ್ ತಂಡವನ್ನ ಹುರಿದುಂಬಿಸುತ್ತಾರೆ. ತ್ರಿವರ್ಣ ಧ್ವಜದ ಬಣ್ಣವನ್ನ ದೇಹಕ್ಕೆ ಬಳಿದು, ಒಂದು ಕೈಯಲ್ಲಿ ಶಂಖ, ಮತ್ತೊಂದು ಕೈಯಲ್ಲಿ ಭಾರತದ ಭಾವುಟ ಹಿಡಿದು ತಂಡಕ್ಕೆ ಸಪೋರ್ಟ್ ಮಾಡುವ ಸುಧೀರ್ ಎಲ್ಲಿರಿಗೂ ಚಿರಪರಿಚಿತ. ಇದೀಗ ಸುಧೀರ್ ಕುಮಾರ್ ಗೌತಮ್‌ಗೆ ಎಮ್ ಎಸ್ ಧೋನಿ ಸ್ಪೆಷಲ್ ಗಿಫ್ಟ್ ನೀಡಿದ್ದಾರೆ. ರಾಂಚಿಯಲ್ಲಿರುವ ಧೋನಿ ಮನೆಯಲ್ಲಿ ಸುಧೀರ್ ಕುಮಾರ್ ಗೌತಮ್‌ಗೆ ಭರ್ಜರಿ ಔತಣ ಕೂಟ ಆಯೋಜಿಸಿದ್ದರು. 

ಇತ್ತೀಚೆಗಷ್ಟೇ ಎಮ್ ಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್, ಐಪಿಎಲ್ ಟ್ರೋಫಿ ವಶಪಡಿಸಸಿಕೊಂಡು ಇತಿಹಾಸ ರಚಿಸಿತ್ತು. ಇದೀಗ ಕ್ರಿಕೆಟ್ ಅಭಿಮಾನಿ ಸುಧೀರ್ ಕುಮಾರ್ ಗೌತಮ್‌ಗೆ ಔತಣ ಕೂಟ ಆಯೋಜಿಸಿ ಅಭಿಮಾನಿಯನ್ನ ಗೌರವಿಸಿದ್ದಾರೆ. ಎಮ್ ಎಸ್ ಧೋನಿ, ಪತ್ನಿ ಸಾಕ್ಷಿ ಧೋನಿ, ಮಗಳು ಝಿವಾ ಹಾಗೂ ಧೋನಿ ಪೋಷಕರ ಜೊತೆಗೆ ಭೋಜನ ಸವಿದ ಸುಧೀರ್ ಕುಮಾರ್, ಸಾಮಾಜಿಕ ಜಾಲತಾಣದಲ್ಲಿ ತಮ್ಮ ಸಂತಸವನ್ನ ಹಂಚಿಕೊಂಡಿದ್ದಾರೆ. 

Scroll to load tweet…