ಎಂ.ಎಸ್ ಧೋನಿ ಎಷ್ಟು ಕೂಲ್ ಅನ್ನೋದು ಎಲ್ಲರಿಗೂ ಗೊತ್ತು. ಆದರೆ ಮೊನ್ನೆ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಮಹಿ ಕೂಲಾಗಿರಲಿಲ್ಲ. ತಮ್ಮ ಸಹುದ್ಯೋಗಿ ಜಾಧವ್ ಮೇಲೆ ಮೈದಾನದಲ್ಲೇ ಫುಲ್ ಸಿಟ್ಟಾಗಿಬಿಟ್ಟಿದ್ರು. ಅದು ಎಷ್ಟರ ಮಟ್ಟಿಗೆ ಅಂದ್ರೆ ಧೋನಿಯ ಸಿಟ್ಟಿಗೆ ಹೆದರಿದ ಜಾಧವ್ ಔಟ್ ಆಗಿ ಪೆವಿಲಿಯನ್ಗೆ ಸೇರಿಬಿಟ್ರು. ಅಷ್ಟಕ್ಕೂ ಧೋನಿ ಸಿಟ್ಟಾಗಿದ್ಯಾಕೆ..? ಇಲ್ಲಿದೆ ನೋಡಿ ವಿವರ
ಮಿಸ್ಟರ್ ಕೂಲ್ ಅಂತಾನೇ ಕರೆಯಿಸಿಕೊಳ್ಳೋ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಹೆಸರಿಗೆ ತಕ್ಕಂತೆ ಕೂಲ್ ಕೂಲ್. ಪಂದ್ಯ ಯಾವುದೇ ಘಟ್ಟದಲ್ಲಿದ್ದರೂ, ತಂಡ ಸೋಲುತ್ತಿದ್ದರೂ ಈತ ಮಾತ್ರ ಏನೂ ಆಗೇ ಇಲ್ವೆನೋ ಅನ್ನೋ ಥರ ಆರಾಮಾಗಿ ಇರುತ್ತಾನೆ. ಕೂಲಾಗೇ ಸೋಲೋ ಪಂದ್ಯವನ್ನ ಗೆಲ್ಲಿಸುತ್ತಾನೆ. ಬ್ಯಾಟಿಂಗ್ನಲ್ಲಿ ಎಷ್ಟೇ ವೈಲೆಂಟ್ ಆದ್ರೂ ನಡುವಳಿಕೆಯಲ್ಲಿ ತುಂಬಾನೇ ಕೂಲ್ ನಮ್ಮ ಧೋನಿ.
ಮೈದಾನದಲ್ಲೇ ಜಾಧವ್ರನ್ನ ಗುರಾಯಿಸಿದ ಧೋನಿ
ಮೊನ್ನೆ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಕೂಲ್ ಧೋನಿ ಫೊರ್ ದ ಫರ್ಸ್ಟ್ ಟೈಮ್ ಸಿಟ್ಟಾಗಿಬಿಟ್ಟಿದ್ರು. ತಮ್ಮ ತಾಳ್ಮೆಯನ್ನ ಕಳೆದುಕೊಂಡಿದ್ರು. ವಿಶೇಷವಂದ್ರೆ ಮಹಿ ವಿರೋಧಿ ತಂಡದ ಮೇಲೆ ಸಿಟ್ಟಾಗಿರಲಿಲ್ಲ. ಬದಲಿಗೆ ತಮ್ಮದೇ ತಂಡದ ಸಹ ಆಟಗಾರ ಕೇದರ್ ಜಾಧವ್ ಮೇಲೆ ಕೋಪಗೊಂಡಿದ್ರು. ಮೈದಾನದಲ್ಲೇ ಗುರಾಯಿಸಿ ತಮ್ಮ ಆಕ್ರೋಶವನ್ನ ಹೊರಹಾಕಿದ್ರು.
ಧೋನಿಗೆ ಕೋಪ ಬರಲು ಜಾಧವ್ ಏನ್ ಮಾಡಿದ್ರು..?
ಅಷ್ಟಕ್ಕೂ ಕೂಲ್ ಧೋನಿ ಜಾಧವ್ ಮೇಲೆ ಸಿಟ್ಟಾಗಲು ಕಾರಣವೇನು ಗೊತ್ತಾ..? ಜಾಧವ್ ಫಾಸ್ಟಾಗಿ ರನ್ ಓಡುತ್ತಿಲ್ಲ ಅಂತ. ಹೌದು, ಮೊನ್ನೆ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡಿ 87 ರನ್ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಈ ವೇಳೆ ಕ್ರೀಸ್ನಲ್ಲಿದ್ದ ಧೋನಿ ಮತ್ತು ಜಾಧವ್ ನಿಧಾನವಾಗಿ ರನ್ ಗಳಿಸುತ್ತಿದ್ರು. ಈ ವೇಳೆ ಮಹಿ ಸಿಂಗಲ್ ಕದಿಯಲು ಮುಂದಾದ್ರು. ಆದ್ರೆ ಧೋನಿ ಕೂಗಿಗೆ ಜಾಧವ್ ಹೂಗುಡಲಿಲ್ಲ. ಧೋನಿ ಸ್ವಲ್ಪದ್ರಲ್ಲೇ ಔಟಾಗೋದು ತಪ್ಪಿತು. ಇದ್ರಿಂದ ಕೋಪಗೊಂಡ ಧೋನಿ, ಜಾಧವ್ರನ್ನ ಇನ್ನಿಲ್ಲದಂತೆ ಗುರಾಯಿಸಿದ್ರು.
ಧೋನಿ ಭಯಕ್ಕೆ ವಿಕೆಟ್ ಒಪ್ಪಿಸಿದ ಕೇದರ್
ಧೋನಿ ಲುಕ್ಗೆ ಫುಲ್ ಬೆದರಿದ ಜಾಧವ್ ಭಯದಿಂದಲೇ ಮತ್ತೆ ಬ್ಯಾಟಿಂಗ್ ಮಾಡಲು ಮುಂದಾದ್ರು. ಆದ್ರೆ ವಿಕೆಟ್ ಒಪ್ಪಿಸಿಬಿಟ್ರು. ಧೋನಿಯ ಲುಕ್ ನೋಡಿ ಭಯಬೀತರಾಗಿದ್ದ ಜಾಧವ್ ಇನ್ನೂ ಕ್ರೀಸ್ನಲ್ಲೇ ಇದ್ರೆ ಖಂಡಿತ ಮಹಿ ತನ್ನನ್ನ ಬಿಡಲ್ಲ ಎಂದು ತಿಳಿದು ಸಿಲ್ಲಿಯಾಗಿ ಔಟಾಗಿಬಿಟ್ರು.
ಇನ್ಮುಂದಾದ್ರೂ ಪಾಠ ಕಲಿತಾರಾ ಜಾಧವ್..?
ಕೇದರ್ ಜಾಧವ್ ಈ ರೀತಿ ಎಡವಟ್ಟುಗಳನ್ನ ಮಾಡ್ತಿರೋದು ಇದೇ ಮೊದಲೇನಲ್ಲ. ಬ್ಯಾಟಿಂಗ್ ಮತ್ತು ಬೌಲಿಂಗ್ ಹೊರತುಪಡಿಸಿದ್ರೆ ರನ್ನಿಂಗ್ ಮತ್ತು ಫೀಲ್ಡಿಂಗ್ನಲ್ಲಿ ಜಿರೋ. ಹೀಗೆ ಮುಂದುವರಿದ್ರೆ ಜಾಧವ್ ಕೆಲವೇ ದಿನಗಳಲ್ಲಿ ಟೀಂ ಇಂಡಿಯಾ ದಿಂದ ಕಿಕೌಟ್ ಆದ್ರೂ ಆಶ್ಚರ್ಯವಿರೋದಿಲ್ಲ. ಆದ್ರೆ ಹಾಗಾಗದಿರಲಿ ಆದಷ್ಟು ಬೇಗಾ ಅವರ ವೀಕ್ನೆಸ್ಗಳಿಂದ ಹೊರ ಬರಲಿ ಅನ್ನೋದು ನಮ್ಮ ಆಶಯ.
