ಬೆಂಗಳೂರು ರಿಯಲ್ ಎಸ್ಟೇಟ್ ಗ್ರೂಪ್ ರಾಯಭಾರಿಯಾದ ಎಂ ಎಸ್ ಧೋನಿ

First Published 26, Jun 2018, 6:02 PM IST
MS Dhoni anointed as brand ambassador of renowned real estate group
Highlights

ಟೀಂ ಇಂಡಿಯಾ ಕ್ರಿಕೆಟಿಗ ಎಂ ಎಸ್ ಧೋನಿ ಇದೀಗ ಬೆಂಗಳೂರು ಮೂಲದ ರಿಯಲ್ ಎಸ್ಟೇಟ್ ಕಂಪೆನಿ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ. ಧೋನಿ ಹಾಗೂ ರಿಯಲ್ ಎಸ್ಟೇಟ್ ಕಂಪೆನಿ ನಡುವಿನ ಒಪ್ಪಂದದ ವಿಶೇಷತೆ ಏನು?ಇಲ್ಲಿದೆ ವಿವರ

ಬೆಂಗಳೂರು(ಜೂ.26): ಬೆಂಗಳೂರು ಮೂಲದ ರಿಯಲ್ ಎಸ್ಟೇಟ್ ಸಂಸ್ಥೆಯ ರಾಯಭಾರಿಯಾಗಿ ಟೀಂ ಇಂಡಿಯಾ ಕ್ರಿಕೆಟಿಗ ಎಂ ಎಸ್ ಧೋನಿ ನೇಮಕಗೊಂಡಿದ್ದಾರೆ. ದಕ್ಷಿಣ ಭಾರತದಲ್ಲಿ ರಿಯಲ್ ಎಸ್ಟೇಟ್ ಮೂಲಕ ಜನಪ್ರೀಯವಾಗಿರೋ ಸುಮಧುರ ಗ್ರೂಪ್ ಸಂಸ್ಥೆಗೆ ಧೋನಿ ಅಂಬಾಸಿಡರ್ ಆಗಿ ಆಯ್ಕೆಯಾಗಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತ್ಯುತ್ತಮ ನಾಯಕ ಹಾಗೂ ಕ್ರಿಕೆಟಿಗನಾಗಿ ಗುರುತಿಸಿಕೊಂಡಿರುಎಂ ಎಸ್ ಧೋನಿ ಸುಮಧುರ ಸಂಸ್ಥೆಯ ರಾಯಭಾರಿಯಾಗಿ ನೇಮಕಗೊಂಡಿರೋದು ನಮ್ಮ ಹೆಮ್ಮೆ ಎಂದು ಸುಮುಧುರ ರಿಯಲ್ ಎಸ್ಟೇಟ್ ಗ್ರೂಪ್ ಸಂಸ್ಥೆಯ ವ್ಯವಸ್ಥಾಪ ನಿರ್ದೇಶಕ ಮಧೂಸೂಧನ್ ಜಿ ಹೇಳಿದ್ದಾರೆ.

ವಿಶ್ವದಲ್ಲೇ ಅತ್ಯಂತ ಜನಪ್ರೀಯ ಕ್ರಿಕೆಟಿಗನಾಗಿರೋ ಎಂ ಎಸ್ ಧೋನಿ ಸುಮಧುರ ಸಂಸ್ಥೆಯ ರಾಯಭಾರಿಯಾಗೋ ಮೂಲಕ ಸಂಸ್ಥೆಯ ಬ್ರ್ಯಾಂಡ್ ವ್ಯಾಲ್ಯೂ ಹೆಚ್ಚಿಸಿದ್ದಾರೆ ಎಂದು ಮಧೂಸೂಧನ್ ಹೇಳಿದ್ದಾರೆ.

ಸುಮಧುರ ಗ್ರೂರ್ ರಾಯಭಾರಿ ಒಪ್ಪಂದಕ್ಕೆ ಧೋನಿಗೆ ನೀಡಿರುವ ಹಣವೆಷ್ಟು ಅನ್ನೋದನ್ನ ಯಾರೂ ಬಹಿರಂಗ ಪಡಿಸಿಲ್ಲ. ಇಷ್ಟೇ ಅಲ್ಲ ಸುಮಧುರ ಹಾಗೂ ಧೋನಿ ನಡುವಿನ ಒಪ್ಪಂದ ಅವಧಿ ಕೂಡ ಬಹಿರಂಗವಾಗಿಲ್ಲ.

 

loader