ಭಾರತದ ಮಾಜಿ ಕ್ಯಾಪ್ಟ'ನ್ ಮಹೇಂದ್ರ ಸಿಂಗ್ ಧೋನಿ(45: 68 ಎಸೆತ, 1 ಬೌಂಡರಿ) ಹಾಗೂ ಬೌಲರ್ ಭುವನೇಶ್ವರ್ ಕುಮಾರ್(ಅಜೇಯ 53: 80 ಎಸೆತ, 4 ಬೌಂಡರಿ ಹಾಗೂ 1 ಭರ್ಜರಿ ಸಿಕ್ಸ್'ರ್). ಕೊನೆಯವರೆಗೂ ನಿಧಾನಗತಿಯ ಆಟವಾಡಿದ ಈ ಜೋಡಿ 8 ನೇ ವಿಕೇಟ್' ಪಾರ್ಟ್'ನರ್'ಶಿಪ್'ಗೆ ದಾಖಲೆ 100 ರನ್ ಬಾರಿಸಿ ಗೆಲುವಿನ ಪತಾಕೆ ಹಾರಿಸಿದರು.
ಪಲ್ಲಿಕೇಲೆ(ಆ.24): ಇನ್ನೇನು ಧೋನಿಯ ಯುಗ ಮುಗಿಯಿತು ಎನ್ನುತ್ತಿದ್ದವರಿಗೆ ತಮ್ಮ ಸಮಯೋಚಿತ ಆಟದಿಂದ ಸೋತು ಬಿಟ್ಟೆವು ಎನ್ನುವ ಪಂದ್ಯವನ್ನು ಗೆಲ್ಲಿಸಿ ನನ್ನ ಆಟ ಇನ್ನು ಇದೆ ತೋರಿಸಿದ್ದಾರೆ.
ಶ್ರೀಲಂಕಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಸಿಂಹಿಣಿಗಳು ಒಡ್ಡಿದ್ದ 231 ರನ್'ಗಳ ಸವಾಲನ್ನು ಬೆನ್ನಟ್ಟಿದ ಟೀಂ ಇಂಡಿಯಾ 21.5 ಓವರ್'ಗಳಲ್ಲಿ 131 ರನ್'ಗಳಿಗೆ 7 ವಿಕೇಟ್ ಕಳೆದು'ಕೊಂಡಿದ್ದಾಗ ಭಾರತದ ಗೆಲುವಿನ ಆಸೆ ಮುಗಿಯಿತು ಎಂದು ಕೊಂಡಿದ್ದವರೆ ಹೆಚ್ಚು.
ಆಗ ಬ್ಯಾಟಿಂಗ್ ಮಾಡುತ್ತಿದ್ದವರು ಭಾರತದ ಮಾಜಿ ಕ್ಯಾಪ್ಟ'ನ್ ಮಹೇಂದ್ರ ಸಿಂಗ್ ಧೋನಿ(45: 68 ಎಸೆತ, 1 ಬೌಂಡರಿ) ಹಾಗೂ ಬೌಲರ್ ಭುವನೇಶ್ವರ್ ಕುಮಾರ್(ಅಜೇಯ 53: 80 ಎಸೆತ, 4 ಬೌಂಡರಿ ಹಾಗೂ 1 ಭರ್ಜರಿ ಸಿಕ್ಸ್'ರ್). ಕೊನೆಯವರೆಗೂ ನಿಧಾನಗತಿಯ ಆಟವಾಡಿದ ಈ ಜೋಡಿ 8 ನೇ ವಿಕೇಟ್' ಪಾರ್ಟ್'ನರ್'ಶಿಪ್'ಗೆ ದಾಖಲೆ 100 ರನ್ ಬಾರಿಸಿ ಗೆಲುವಿನ ಪತಾಕೆ ಹಾರಿಸಿದರು. ಭಾರತ ಮುರಿಯದ 8 ವಿಕೇಟ್' ನಷ್ಟಕ್ಕೆ 100 ರನ್ ಹೊಡೆದಿರುವುದು ಹೊಸ ದಾಖಲೆಯಾಗಿದೆ.
ಒಂದೇ ಓವರ್'ನಲ್ಲಿ 3 ವಿಕೇಟ್
ಒಂದು ಗಂಟೆ ಮಳೆ ಬಂದ ಕಾರಣ ಶ್ರೀಲಂಕಾ ನೀಡಿದ್ದ 236/8 ರನ್'ಅನ್ನು ಡೆಕ್ವರ್ಥ ಲೂಯಿಸ್ ನಿಯಮದ ಪ್ರಕಾರ 47 ಓವರ್'ಗಳಲ್ಲಿ 231 ಕ್ಕೆ ಇಳಿಸಲಾಯಿತು. ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ(54) ಹಾಗೂ ಶಿಖರ್ ಧವನ್(49) 15.3 ಓವರ್'ಗಳಲ್ಲಿ ಮೊದಲ ವಿಕೇಟ್ ನಷ್ಟಕ್ಕೆ ಉತ್ತಮವಾಗಿ ಆಡಿದರು. ಇವರಿಬ್ಬರು ಔಟಾದ ನಂತರ ಭಾರತಕ್ಕೆ ಶುರುವಾಯಿತು ತೊಂದರೆ. ಕೇವಲ 18 ರನ್ ಆಗುವಷ್ಟರಲ್ಲಿ 5 ಓವರ್'ಗಳಲ್ಲಿ ಟೀಂ ಇಂಡಿಯಾ ದಾಂಡಿಗರು 5 ವಿಕೇಟ್ ಕಳೆದು ಕೊಂಡರು. ಸ್ಪಿನ್ನರ್ ಧನಂಜಯ್ ಮಾಡಿದ 17 ನೇ ಓವರ್'ನಲ್ಲಿ ಕೊಹ್ಲಿ, ರಾಹುಲ್ ಹಾಗೂ ಜಾಧವ್ ಅವರನ್ನು ಬೋಲ್ಡ್' ಮಾಡಿ ಪೆವಿಲಿಯನ್'ಗೆ ಕಳಿಸಿದರು.
ವ್ಯರ್ಥವಾದ ಧನಂಜಯ್ ಹೋರಾಟ
ಶ್ರೀಲಂಕಾದ ಸ್ಪಿನ್ನರ್ ಎ.ಧನಂಜಯ 54 ರನ್'ಗಳಿಗೆ 6 ವಿಕೇಟ್ ಕಬಳಿಸಿದರೂ ಧೋನಿ ಹಾಗೂ ಭುವಿ ಸೂಪರ್ ಆಟದ ಪರಿಣಾಮವಾಗಿ ಭಾರತದ ಗೆಲುವನ್ನು ಕಿತ್ತುಕೊಳ್ಳಲು ಆಗಲಿಲ್ಲ.
ಶ್ರೀಲಂಕಾದಿಂದ ಸಾಧಾರಣ ಮೊತ್ತ
ಟಾಸ್ ಗೆದ್ದ ನಾಯಕ ವಿರಾಟ್ ಕೊಹ್ಲಿ ಸಿಂಹಿಣಿ ತಂಡವನ್ನು ಬ್ಯಾಟಿಂಗ್'ಗೆ ಆಹ್ವಾನಿಸಿದರು. ಮೊದಲ ಏಕದಿನ ಪಂದ್ಯದಂತಯೇ ಇಲ್ಲೂ ಪ್ರಮುಖ ದಾಂಡಿಗರ್ಯಾರು ಉತ್ತಮ ಆರಂಭ ಒದಗಿಸಲಿಲ್ಲ ಸಿರಿ'ವರ್ಧನಾ(58), ಕುಪಗೇಂದ್ರ(40) ಡಿಕ್'ವೆಲ್ಲಾ(31) ಹಾಗೂ ಮ್ಯಾಥ್ಯೂ'ಸ್(20) ರನ್ ಗಳಿಸುವುದರ ಮೂಲಕ ಶ್ರೀಲಂಕಾ ತಂಡ 50 ಓವರ್'ಗಳಿಗೆ 236 ಸೇರಿಸಲು ಸಾಧ್ಯವಾಯಿತು. ಭಾರತದ ಪರ ಬುಮ್ರಾ 43/4 ಹಾಗೂ ಚಹಾಲ್ 43/2 ವಿಕೇಟ್ ಗಳಿಸುವ ಮೂಲಕ ಯಶಸ್ವಿ ಬೌಲರ್ ಎನಿಸಿದರು. ಟೀಂ ಇಂಡಿಯಾ ಗೆದ್ದರೂ ಅತ್ಯುತ್ತಮವಾಗಿ ಬೌಲಿಂಗ್ ಮಾಡಿದ ಎ. ಧನಂಜಯ ಪಂದ್ಯ ಪುರುಶೋತ್ತಮ ಕೀರ್ತಿಗೆ ಪಾತ್ರರಾದರು.
ಸ್ಕೋರ್
ಶ್ರೀಲಂಕಾ: 236/8 (50)
(ಸಿರಿವರ್ಧನಾ: 58, ಕಾಪುಗೇಂದ್ರ: 40, ಬುಮ್ರಾ 43/4, ಚಹಲ್43/2)
ಭಾರತ: 231/1(44.2)
(ಆರ್. ಶರ್ಮಾ:54, ಎಸ್.ಧವನ್: 49, ಧೋನಿ ಅಜೇಯ 45 ಹಾಗೂ ಭುವನೇಶ್ವರ್ ಕುಮಾರ್ ಅಜೇಯ 53, ಧನಂಜಯ: 54/6)
ಪಂದ್ಯ ಪುರುಶೋತ್ತಮ: ೆ. ಧನಂಜಯ
ಡೆಕ್ವರ್ಥ್ ಲೂಹಿಸ್ ನಿಯಮದ ಪ್ರಕಾರ ಭಾರತಕ್ಕೆ 3 ವಿಕೇಟ್ ಜಯ
