ಸಿರಾಜ್ ಫೇಸ್'ಬುಕ್ ಹ್ಯಾಕ್ ಮಾಡಿದ 14ರ ಬಾಲಕ ಮಾಡಿದ್ದೇನು ಗೊತ್ತಾ..?

First Published 25, Jan 2018, 4:38 PM IST
Mohammed Siraj social media accounts compromised hacker sends I Love You messages to all friends
Highlights

ಸಿರಾಜ್‌'ರ ಫೇಸ್‌'ಬುಕ್ ಮಾತ್ರವಲ್ಲದೆ ಇನ್'ಸ್ಟಾಗ್ರಾಂ, ಟ್ವೀಟರ್, ಜಿ-ಮೇಲ್ ಖಾತೆಗಳನ್ನೂ ಹ್ಯಾಕ್ ಮಾಡಿದ್ದ ಆರೋಪಿ, ಅಕೌಂಟ್‌'ಗಳ ಮೂಲಕ ಕ್ರಿಕೆಟಿಗನ ಸ್ನೇಹಿತರಿಗೆ ‘ಐ ಲವ್ ಯೂ’ ಎಂದು ಸಂದೇಶಗಳನ್ನು ಕಳುಹಿಸಿದ್ದ.

ಹೈದರಾಬಾದ್(ಜ.25): ಭಾರತೀಯ ಕ್ರಿಕೆಟಿಗ ಮೊಹಮ್ಮದ್ ಸಿರಾಜ್ ಅವರ ಫೇಸ್‌'ಬುಕ್ ಖಾತೆಯನ್ನು ಹ್ಯಾಕ್ ಮಾಡಿದ ಆರೋಪದ ಮೇಲೆ 14 ವರ್ಷದ ಬಾಲಕನೋರ್ವನನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ.

ಸಿರಾಜ್‌'ರ ಫೇಸ್‌'ಬುಕ್ ಮಾತ್ರವಲ್ಲದೆ ಇನ್'ಸ್ಟಾಗ್ರಾಂ, ಟ್ವೀಟರ್, ಜಿ-ಮೇಲ್ ಖಾತೆಗಳನ್ನೂ ಹ್ಯಾಕ್ ಮಾಡಿದ್ದ ಆರೋಪಿ, ಅಕೌಂಟ್‌'ಗಳ ಮೂಲಕ ಕ್ರಿಕೆಟಿಗನ ಸ್ನೇಹಿತರಿಗೆ ‘ಐ ಲವ್ ಯೂ’ ಎಂದು ಸಂದೇಶಗಳನ್ನು ಕಳುಹಿಸಿದ್ದ. ಇದರಿಂದ ಗಲಿಬಿಲಿಗೊಂಡ ಸಿರಾಜ್ ಸ್ನೇಹಿತರು, ಕರೆ ಮಾಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ತನಿಖೆ ವೇಳೆ ಆತ ವಾಚ್‌'ಮನ್ ಒಬ್ಬರ ಮಗ ಎಂದು ತಿಳಿದುಬಂದಿದೆ.

ನನ್ನ ಸಾಮಾಜಿಕ ಜಾಲತಾಣಗಳ ಅಕೌಂಟ್ ಹ್ಯಾಕ್ ಆಗಿತ್ತು. ತೆಲಂಗಾಣ ಕ್ರೈಂ ಬ್ರಾಂಚ್ ಪೊಲೀಸರ ಸಹಾಯದಿಂದ ನನ್ನ ಖಾತೆಯನ್ನು ಭದ್ರಪಡಿಸಿಕೊಳ್ಳಲು ಅನುಕೂಲವಾಯಿತು ಎಂದು ಸಿರಾಜ್ ಇನ್'ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

loader