ಭಾರತದ ಬೃಹತ್ ಮೊತ್ತವನ್ನು ಬೆನ್ನಟ್ಟಿರುವ ರಂಗನಾ ಹೆರಾತ್ ಪಡೆ ದಿನದಾಂತ್ಯಕ್ಕೆ  44 ಓವರ್‌ಗಳಲ್ಲಿ 154/5 ರನ್ ಗಳಿಸಿ ಫಾಲೋ'ಆನ್ ಭೀತಿಯಲ್ಲಿದ್ದಾರೆ. ಉಪುಲ್ ತರಂಗ 64(93) ಹಾಗೂ ಮಾಜಿ ನಾಯಕ  ಏಂಜೆಲೋ ಮ್ಯಾಥ್ಯೂಸ್(54 ಅಜೇಯ) ರನ್ ಗಳಿಸಿದ್ದನ್ನು ಬಿಟ್ಟರೆ ಉಳಿದ ಆಟಗಾರರು ಎರಡಂಕಿಯ ಮೊತ್ತವನ್ನು ಗಳಿಸಲು ಸಾಧ್ಯವಾಗಲಿಲ್ಲ. ಭಾರತದ ಪರ ಮೊಹಮ್ಮದ್ ಶಮಿ 30/2, ಉಮೇಶ್ ಯಾದವ್ 50/01, ರವಿಚಂದ್ರನ್ ಅಶ್ವಿನ್ 49/1 ವಿಕೇಟ್ ಪಡೆದು ಶ್ರೀಲಂಕಾ ಬ್ಯಾಟ್ಸ್'ಮೆನ್'ಗಳನ್ನು ಕಟ್ಟಿ ಹಾಕಿದರು.

ಗಾಲೆ(ಜು.27): ಭಾರತದ ಬೌಲರ್'ಗಳ ಕರಾರುವಕ್ ದಾಳಿಯ ಪರಿಣಾಮ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್'ನ 2ನೇ ದಿನವಾದು ಇಂದು ಭಾರತ ಬಿಗಿ ಹಿಡಿತ ಸಾಧಿಸಿದೆ.

ದಿನದಂತ್ಯಕ್ಕೆ ಶ್ರೀಲಂಕಾ ಮೊದಲ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ನಷ್ಟಕ್ಕೆ 154 ರನ್ ಗಳಿಸಿ ಫಾಲೋಆನ್ ಭೀತಿಗೆ ಸಿಲುಕಿದೆ. ಮೊದಲ ಟೆಸ್ಟ್'ನ ಚೊಚ್ಚಲ ಇನ್ನಿಂಗ್ಸ್ ಆಡಿದ ಹಾರ್ದಿಕ್ ಪಾಂಡ್ಯ 49 ಎಸೆತಗಳಲ್ಲಿ 50 ರನ್ ಸಿಡಿಸಿ ಭಾರತ 600(133.1 ಓವರ್) ರನ್‌'ಗಳ ಬೃಹತ್ ಮೊತ್ತ ಗಳಿಸಲು ನೆರವಾದರು. ಶ್ರೀಲಂಕಾ ಪರ ನುವಾನ್ ಪ್ರದೀಪ್ 132/6 ಹಾಗೂ ಲಹಿರು ಕುಮಾರ 131/3 ವಿಕೇಟ್ ಪಡೆದರು.

ಭಾರತದ ಬೃಹತ್ ಮೊತ್ತವನ್ನು ಬೆನ್ನಟ್ಟಿರುವ ರಂಗನಾ ಹೆರಾತ್ ಪಡೆ ದಿನದಾಂತ್ಯಕ್ಕೆ 44 ಓವರ್‌ಗಳಲ್ಲಿ 154/5 ರನ್ ಗಳಿಸಿ ಫಾಲೋ'ಆನ್ ಭೀತಿಯಲ್ಲಿದ್ದಾರೆ. ಉಪುಲ್ ತರಂಗ 64(93) ಹಾಗೂ ಮಾಜಿ ನಾಯಕ ಏಂಜೆಲೋ ಮ್ಯಾಥ್ಯೂಸ್(54 ಅಜೇಯ) ರನ್ ಗಳಿಸಿದ್ದನ್ನು ಬಿಟ್ಟರೆ ಉಳಿದ ಆಟಗಾರರು ಎರಡಂಕಿಯ ಮೊತ್ತವನ್ನು ಗಳಿಸಲು ಸಾಧ್ಯವಾಗಲಿಲ್ಲ. ಭಾರತದ ಪರ ಮೊಹಮ್ಮದ್ ಶಮಿ 30/2, ಉಮೇಶ್ ಯಾದವ್ 50/01, ರವಿಚಂದ್ರನ್ ಅಶ್ವಿನ್ 49/1 ವಿಕೇಟ್ ಪಡೆದು ಶ್ರೀಲಂಕಾ ಬ್ಯಾಟ್ಸ್'ಮೆನ್'ಗಳನ್ನು ಕಟ್ಟಿ ಹಾಕಿದರು.

ಲಂಕನ್ನರು ಮೊದಲ ಇನ್ನಿಂಗ್ಸ್‌ನಲ್ಲಿ 446 ರನ್‌ಗಳ ಹಿನ್ನಡೆಯಲ್ಲಿದ್ದು, ಫಾಲೋ ಆನ್ ತಪ್ಪಿಸಿಕೊಳ್ಳಲು ಇನ್ನೂ 246 ರನ್ ಗಳಿಸಬೇಕಿದೆ. ಸದ್ಯ ಶ್ರೀಲಂಕಾಕ್ಕೆ ಮಾಜಿ ನಾಯಕ ಮ್ಯಾಥ್ಯೂಸ್ ಜೀವಾಳ.

--

ಸ್ಕೋರ್ ವಿವರ

ಭಾರತ ಮೊದಲ ಇನಿಂಗ್ಸ್ 133.1 ಓವರ್‌ಗಳಲ್ಲಿ 600/10

(ಮೊದಲ ದಿನದಂತ್ಯಕ್ಕೆ 399/3)

ಚೇತೇಶ್ವರ್ ಪೂಜಾರ 153, ಅಜಿಂಕ್ಯ ರಹಾನೆ 57, ರವಿಚಂದ್ರನ್ ಅಶ್ವಿನ್ 47, ಹಾರ್ದಿಕ್ ಪಾಂಡ್ಯ 50

ನುವಾನ್ ಪ್ರದೀಪ್ 132/6, ಲಹಿರು ಕುಮಾರ 131/3

ಶ್ರೀಲಂಕಾ ಮೊದಲ ಇನಿಂಗ್ಸ್ 44 ಓವರ್‌ಗಳಲ್ಲಿ 154/5

(ಎರಡನೇ ದಿನದಂತ್ಯಕ್ಕೆ)

ಉಪುಲ್ ತರಂಗ 64

ಏಂಜೆಲೋ ಮ್ಯಾಥ್ಯೂಸ್ ಅಜೇಯ 54

ಮೊಹಮ್ಮದ್ ಶಮಿ 30/3