ದೆಹಲಿ(ಸೆ.14): ಇಂಡಿಯನ್ ಪ್ರೀಮಿಯರ್ ಲೀಗ್ ಎಂಬ ಹೊಸ ಕನಸನ್ನು ಕಟ್ಟಿ ಬೆಳೆಸಿ, ವಿಶ್ವ ಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ ಮಾಡಿ, ನಂತರ ಅಲ್ಲಿಂದಲೇ ಉಚ್ಚಾಟಿತಗೊಂಡ ಲಲಿತ್​ ಮೋದಿ ಅವರ ತಮ್ಮ ಮಗನನ್ನು ಕ್ರಿಕೆಟ್ ಅಂಗಳದಲ್ಲಿ ಬೆಳೆಸುತ್ತಿದ್ದಾರೆ.

ಸದ್ಯ ಲಲಿತ್​ ಮೋದಿ ಅವರ ಮಗ, ರಾಜಸ್ಥಾನ್​ ಕ್ರಿಕೆಟ್​ ಸಂಸ್ಥೆಯ ಅಧಿನದಲ್ಲಿ ಬರುವ ಅಲ್ವಾರ್​ ಜಿಲ್ಲೆಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಮುಂದೆ ಒಂದೊಂದಾಗಿ ಅಧಿಕಾರವನ್ನು ಪಡೆಯುವುದು ಅವರ ಗುರಿಯಾಗಿದೆ.

ಈ ಮೂಲಕ ಮೋದಿ ತಮ್ಮ ಮಗನನ್ನು ರಾಜಸ್ಥಾನ್​ ಕ್ರಿಕೆಟ್​ ಸಂಸ್ಥೆಯ ಅಧ್ಯಕ್ಷನ್ನಾಗಿರುವ ಕನಸು ಕಾಣುತ್ತಿದ್ದಾರೆ. ತನ್ನಿಂದ ದೂರವಾಗಿದ್ದ ಅಧಿಕಾರವನ್ನು ಮಗನ ಮೂಲಕ ಪಡೆಯುವ ಪ್ರಯತ್ನವನ್ನು ಮಾಡುತ್ತಿದ್ದಾರೆ.

ಸದ್ಯ ಬಂಧನದ ಭೀತಿಯಿಂದ ಭಾರತದಿಂದ ಹೊರಗಡೆ ನೆಲೆಸಿರುವ ಲಲಿತ್​ ಮೋದಿ ತಮ್ಮ ಪ್ರಭಾವ ಬೀರಿ ಅವರ ಮಗ ರುಚಿರ್​ ಮೋದಿಯನ್ನು ಅಧ್ಯಕ್ಷನ್ನಾಗಿಸುವಲ್ಲಿ ಸಫಲವಾಗಿದ್ದಾರೆ ಎನ್ನಲಾಗಿದೆ.