ಮಿಥಾಲಿ ರಾಜ್ ರನೌಟ್ ಹಿಂದೆ ಮ್ಯಾಚ್ ಫಿಕ್ಸಿಂಗ್ ನಡೆದಿರುಬಹುದು ಎಂಬಂತಹ ಅನುಮಾನಗಳು ಕೂಡಾ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗಿದ್ದವು.

ಬೆಂಗಳೂರು(ಜು.26) ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಮಿಥಾಲಿ ರಾಜ್ ರನೌಟ್ ಆಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ಈ ಬಗ್ಗೆ ಇದೇ ಮೊದಲ ಬಾರಿಗೆ ಭಾರತ ವನಿತೆಯರ ತಂಡದ ನಾಯಕಿ ಮಿಥಾಲಿ ರಾಜ್ ತುಟಿಬಿಚ್ಚಿದ್ದಾರೆ.

ಮಿಥಾಲಿ ರಾಜ್ ರನೌಟ್ ಹಿಂದೆ ಮ್ಯಾಚ್ ಫಿಕ್ಸಿಂಗ್ ನಡೆದಿರುಬಹುದು ಎಂಬಂತಹ ಅನುಮಾನಗಳು ಕೂಡಾ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗಿದ್ದವು.

ಈ ಕುರಿತು ಪ್ರತಿಕ್ರಿಯಿಸಿದ ಮಿಥಾಲಿ, ‘ರನ್ ಓಡುವ ವೇಳೆ ನನ್ನ ಶೂನ ಸ್ಪೈಕ್ (ಶೂನಲ್ಲಿರುವ ಮೊಳೆ) ಪಿಚ್‌'ನ ಮಧ್ಯದಲ್ಲಿ ಕಚ್ಚಿಕೊಂಡು ಬಿಟ್ಟಿತ್ತು. ಡೈವ್ ಹೊಡೆಯುವ ಪರಿಸ್ಥಿತಿಯಲ್ಲಿಯೂ ಇರಲಿಲ್ಲ. ನಾನು ಅಸಹಾಯಕಳಾಗಿದ್ದೆ. ಬಹುಶಃ ಪಂದ್ಯದ ಪ್ರಸಾರದ ವೇಳೆ ಇದನ್ನು ಸ್ಪಷ್ಟವಾಗಿ ಪ್ರಸಾರಗೊಳಿಸದ ಕಾರಣ ಇದು ಅಭಿಮಾನಿಗಳಿಗೆ ತಿಳಿಯಲಿಲ್ಲ ಎನಿಸುತ್ತದೆ’ ಎಂದು ರನೌಟ್ ಹಿಂದಿನ ರಹಸ್ಯ ಬಿಚ್ಚಿಟ್ಟಿದ್ದಾರೆ.

ಮಿಥಾಲಿ ರಾಜ್ ಫೈನಲ್ ಪಂದ್ಯದಲ್ಲಿ 17 ಗಳಿಸಿದ್ದಾಗ ರನೌಟ್ ಆಗುವ ಮೂಲಕ ಪೆವಿಲಿಯನ್ ಸೇರಿದ್ದರು. ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ದ 9 ರನ್'ಗಳ ಸೋಲು ಕಾಣುವ ಮೂಲಕ ಭಾರತ ವನಿತೆಯರ ತಂಡ ಚೊಚ್ಚಲ ವಿಶ್ವಕಪ್ ಗೆಲ್ಲುವ ಆಸೆಯನ್ನು ಕೈಚೆಲ್ಲಿತು.