ಯಾರ್ಕರ್ ಸ್ಪೆಷಲಿಸ್ಟ್ ಎಂದೇ ಗುರುತಿಸಿಕೊಂಡಿರುವ ಮಿಚೆಲ್ ಸ್ಟಾರ್ಕ್, ಕಾಲಿನ ಗಾಯದಿಂದಾಗಿ 2016ರ ಐಪಿಎಲ್ ಟೂರ್ನಿಯಲ್ಲಿ ಭಾಗವಹಿಸಿರಲಿಲ್ಲ.

ಬೆಂಗಳೂರು(ಫೆ.19): ಐಪಿಎಲ್ ಹರಾಜು ಪ್ರಕ್ರಿಯೆಗೆ ಒಂದು ದಿನ ಬಾಕಿ ಇರುವಾಗಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಆರಂಭಿಕ ವಿಘ್ನ ಎದುರಾಗಿದೆ. ಆಸ್ಟ್ರೇಲಿಯಾ ತಂಡದ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಪರಸ್ಪರ ಸಮ್ಮತಿ ಮೇರೆಗೆ 2017ರ ಐಪಿಎಲ್ ಟೂರ್ನಿಯಿಂದ ಹೊರಗುಳಿಯಲು ತೀರ್ಮಾನಿಸಿದ್ದಾರೆ.

ಪ್ರಸಕ್ತ ಭಾರತ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಆಸೀಸ್ ತಂಡದ ಬೌಲಿಂಗ್ ನೇತೃತ್ವ ವಹಿಸಿಕೊಂಡಿರುವ ಸ್ಟಾರ್ಕ್, 2014 ಮತ್ತು 2015ರಲ್ಲಿ ಆರ್'ಸಿಬಿ ತಂಡವನ್ನು ಪ್ರತಿನಿಧಿಸಿದ್ದರು. ಸ್ಟಾರ್ಕ್ ಐಪಿಎಲ್'ನಿಂದ ಹಿಂದೆ ಸರಿದಿರುವುದರಿಂದ ಆರ್'ಸಿಬಿಗೆ ಖಾತೆಗೆ ಹೆಚ್ಚುವರಿ 5 ಕೋಟಿ ರೂಪಾಯಿ ಉಳಿತಾಯವಾಗಿದ್ದು, ಬೇರೆ ವಿದೇಶಿ ಆಟಗಾರನನ್ನು ಖರೀದಿಸಲು ಅವಕಾಶ ಸಿಕ್ಕಂತಾಗಿದೆ.

ಯಾರ್ಕರ್ ಸ್ಪೆಷಲಿಸ್ಟ್ ಎಂದೇ ಗುರುತಿಸಿಕೊಂಡಿರುವ ಮಿಚೆಲ್ ಸ್ಟಾರ್ಕ್, ಕಾಲಿನ ಗಾಯದಿಂದಾಗಿ 2016ರ ಐಪಿಎಲ್ ಟೂರ್ನಿಯಲ್ಲಿ ಭಾಗವಹಿಸಿರಲಿಲ್ಲ. 2014ರಲ್ಲಿ 14 ವಿಕೆಟ್ ಉರುಳಿಸಿದ್ದ ಸ್ಟಾರ್ಕ್, 2015ರ ಟೂರ್ನಿಯಲ್ಲಿ 20 ಬ್ಯಾಟ್ಸ್'ಮನ್'ಗಳಿಗೆ ಪೆವಿಲಿಯನ್ ಹಾದಿ ತೋರಿಸಿದ್ದರು.