ಸಿಡ್ನಿ(ಡಿ.01): ವೇಗದ ಬೌಲರ್‌'ಗಳಾದ ಮಿಚೆಲ್ ಸ್ಟಾರ್ಕ್ ಮತ್ತು ಜೋಶ್ ಹ್ಯಾಜೆಲ್‌ವುಡ್ ಜೋಡಿ ಆಸ್ಟ್ರೇಲಿಯಾ ಕ್ರಿಕೆಟ್ ಕಂಡ  ಅತ್ಯುತ್ತಮ ಬೌಲಿಂಗ್ ಕಾಂಬಿನೇಶನ್ ಆಗಿದೆ ಎಂದು ಆಸೀಸ್‌ನ ಮಾಜಿ ಆಟಗಾರ ಜಾಸನ್ ಗಿಲೆಸ್ಪಿ ಹೇಳಿದ್ದಾರೆ.

ಪ್ರಸಕ್ತ ಆಸ್ಟ್ರೇಲಿಯಾ ಟೆಸ್ಟ್ ತಂಡದ ಕೋಚ್ ಆಗಿರುವ ಡರೇನ್ ಲೆಹಮಾನ್ ತಂಡವನ್ನು ಉತ್ತಮವಾಗಿ ರೂಪಿಸುವಲ್ಲಿ ನೆರವಾಗಿದ್ದಾರೆ. ಆದರೂ ಆಸೀಸ್ ತಂಡ, ದಕ್ಷಿಣ ಆಫ್ರಿಕಾ ಎದುರು ಸರಣಿ ಸೋಲು ಕಂಡಿತ್ತು. ಇದೇ ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಹ್ಯಾಜೆಲ್‌ವುಡ್ 22ರ ಸರಾಸರಿಯಲ್ಲಿ 17 ವಿಕೆಟ್ ಕಿತ್ತು ಮೊದಲ ಮತ್ತು ಸ್ಟಾರ್ಕ್ 30ರ ಸರಾಸರಿಯಲ್ಲಿ 14 ವಿಕೆಟ್ ಪಡೆದಿದ್ದಾರೆ ಎಂದು ಗಿಲೆಸ್ಪಿ ತಿಳಿಸಿದರು.

ಕಳೆದ ಎರಡು ವರ್ಷದಲ್ಲಿ ಸ್ಟಾರ್ಕ್-ಹ್ಯಾಜೆಲ್‌ವುಡ್ ಜೋಡಿ 161 ವಿಕೆಟ್ ಕಬಳಿಸಿದ್ದಾರೆ.