Asianet Suvarna News Asianet Suvarna News

ಬಿಗ್ ಬ್ಯಾಶ್ ಲೀಗ್‌‌ ಟೂರ್ನಿಗೆ ವಿದಾಯ ಹೇಳಿದ ಮಿಚೆಲ್ ಜಾನ್ಸನ್!

ಆಸ್ಟ್ರೇಲಿಯಾ ಮಾಜಿ ವೇಗಿ ಮಿಚೆಲ್ ಜಾನ್ಸನ್, ಬಿಗ್ ಬ್ಯಾಶ್ ಲೀಗ್ ಟೂರ್ನಿಯಿಂದ ವಿದಾಯ ಹೇಳಿದ್ದಾರೆ. ಲೀಗ್ ಟೂರ್ನಿಗೆ ಗುಡ್ ಬೈ ಹೇಳಿದ ಜಾನ್ಸನ್ ಐಪಿಎಲ್ ಟೂರ್ನಿ ಆಡ್ತಾರ? ಇಲ್ಲಿದೆ ವಿವರ.

Mitchell Johnson retires from Big Bash
Author
Bengaluru, First Published Jul 25, 2018, 6:23 PM IST

ಸಿಡ್ನಿ(ಜು.25): ಆಸ್ಟ್ರೇಲಿಯಾ ಮಾಜಿ ವೇಗಿ ಮಿಚೆಲ್ ಜಾನ್ಸನ್ ಇದೀಗ ಬಿಗ್ ಬ್ಯಾಶ್ ಲೀಗ್ ಟೂರ್ನಿಗೂ ವಿದಾಯ ಹೇಳಿದ್ದಾರೆ. 36 ವರ್ಷದ ಜಾನ್ಸನ್ ಬಿಬಿಎಲ್ ಟೂರ್ನಿಯಲ್ಲಿ ಪರ್ತ್ ಸ್ಕಾಚರ್ಸ್ ತಂಡ ಪ್ರಮುಖ ಆಟಗಾರನಾಗಿ ಗುರಿತಿಸಿಕೊಂಡಿದ್ದರು. ಇದೀಗ ಜಾನ್ಸನ್ ನಿವೃತ್ತಿ ನಿರ್ಧಾರ ಅಭಿಮಾನಿಗಳಿಗೆ ಅಚ್ಚರಿ ತಂದಿದೆ.

2016-17ರ ಸಾಲಿನಲ್ಲಿ ಪರ್ತ್ ಸ್ಕಾಚರ್ಸ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಜಾನ್ಸನ್ ಒಟ್ಟು 19 ಬಿಬಿಎಲ್ ಪಂದ್ಯದಿಂದ 20 ವಿಕೆಟ್ ಕಬಳಿಸಿದ್ದಾರೆ.  ಮುಂಬರುವ ಬಿಗ್ ಬ್ಯಾಶ್ ಲೀಗ್ ಟೂರ್ನಿ ಐಪಿಎಲ್ ಮಾದರಿಯನ್ನ ಅನುಸರಿಸುತ್ತಿದೆ. ಹೀಗಾಗಿ ಸುದೀರ್ಘ ಟೂರ್ನಿ ಆಡೋದು ಕಷ್ಟವಾಗಲಿದೆ ಎಂದು ಜಾನ್ಸನ್ ವಿದಾಯ ಹೇಳಿದ್ದಾರೆ.

ಮುಂಬರುವ ಬಿಗ್ ಬ್ಯಾಶ್ ಲೀಗ್ ಟೂರ್ನಿಯಲ್ಲಿ ಪ್ರತಿ ತಂಡ 14 ಲೀಗ್ ಪಂದ್ಯ ಆಡಲಿದೆ. ಐಪಿಎಲ್ ರೀತಿಯಲ್ಲೇ ತವರು ಹಾಗೂ ತವರಿನಾಚೆ ಪಂದ್ಯ ಆಡಲಿದೆ. ಹೀಗಾಗಿ ಜಾನ್ಸನ್ ವಿದಾಯ ಹೇಳಿದ್ದಾರೆ.  ಆದರೆ ಇತರ ಲೀಗ್ ಟೂರ್ನಿಯಲ್ಲಿ ಮಿಚೆಲ್ ಜಾನ್ಸನ್ ಮುಂದುವರಿಯಲಿದ್ದಾರೆ.

ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಟಿ10 ದುಬೈ ಲೀಗ್ ಟೂರ್ನಿಯಲ್ಲಿ ಜಾನ್ಸನ್ ಪಾಲ್ಗೊಳ್ಳಲಿದ್ದಾರೆ. ಇಷ್ಟೇ ಅಲ್ಲ ಐಪಿಎಲ್ ಟೂರ್ನಿಯಲ್ಲಿ ಭಾಗವಹಿಸೋ ಕುರಿತು ಜಾನ್ಸನ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. 

2015ರಲ್ಲಿ ಟೆಸ್ಟ್ ಕ್ರಿಕೆಟ್‌ನಿಂದ ವಿದಾಯ ಹೇಳಿದ ಜಾನ್ಸನ್, ಬಳಿಕ ಬಿಗ್ ಬ್ಯಾಶ್, ಐಪಿಎಲ್ ಸೇರಿದಂತೆ ಹಲವು ಲೀಗ್ ಟೂರ್ನಿಗಳಲ್ಲಿ ಸಕ್ರೀಯರಾಗಿದ್ದರು. 2018ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ 6 ಪಂದ್ಯಗಳಿಂದ 2 ವಿಕೆಟ್ ಕಬಳಿಸಿದ್ದರು.

Follow Us:
Download App:
  • android
  • ios